Wednesday, 11th December 2024

ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಭೀಕರ ಅಗ್ನಿ ಅವಘಡ

ಬಿಹಾರ: ಮಧುಬನಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿ ಕೊಂಡು, ಧಗಧಗಿಸಿ ಹೊತ್ತಿ ಉರಿದಿರುವ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ದೆಹಲಿಯಿಂದ ಬಿಹಾರದ ಮಧುಬನಿಗೆ ಬಂದಿದ್ದಂತ ಸ್ವಾತಂತ್ರ್ಯ ಸೇನಾನಿ ರೈಲಿನಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ ಪರಿಣಾಮ, ರೈಲು ಬೋಗಿ ಸುಟ್ಟು ಕರಕಲಾಗಿವೆ.

 

ಕಳೆದ ರಾತ್ರಿ ದೆಹಲಿಯಿಂದ ಬಂದು ಮಧುಬನಿಯಲ್ಲಿ ನಿಂತಿದ್ದ ಕಾರಣ, ಯಾವುದೇ ಪ್ರಯಾಣಿಕರು ರೈಲಿನಲ್ಲಿ ಇರಲಿಲ್ಲ. ಹೀಗಾಗಿ, ಪ್ರಾಣಾಪಾಯ ಕೂಡ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.