Wednesday, 9th October 2024

ಉತ್ತರಾಖಂಡ ವಿಧಾನಸಭೆ: ಮೊದಲ ಮಹಿಳಾ ಸ್ಪೀಕರ್ ರಿತು ಖಂಡೂರಿ ಆಯ್ಕೆ

ಉತ್ತರಾಖಂಡ: ಆಡಳಿತಾರೂಢ ಬಿಜೆಪಿ ಪಕ್ಷದ ರಿತು ಖಂಡೂರಿ ಅವರು ಶನಿವಾರ ಉತ್ತರಾಖಂಡ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದರು.

ಉತ್ತರಾಖಂಡ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಸ್ಪೀಕರ್ ಆಯ್ಕೆ ಯಾಗಿದ್ದು, ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಧಾನಸಭೆಯ ಐದನೇ ಸ್ಪೀಕರ್ ಆಗಿ ಶ್ರೀಮತಿ ರಿತು ಖಂಡೂರಿ ಆಯ್ಕೆಯಾದರು.

ಪ್ರೇಮಚಂದ್ ಅಗರ್ವಾಲ್ ಅವರ ಸ್ಪೀಕರ್ ಅವಧಿ ಮಾ.10 ರಂದು ಕೊನೆ ಗೊಂಡಿದ್ದು, ಉತ್ತರಾಧಿಕಾರಕ್ಕೆ ರಿತು ಖಂಡೂರಿ ಆಯ್ಕೆ ಯಾಗಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ಖಂಡೂರಿ ಅವರನ್ನು ಅಭಿನಂದಿಸಿ, ನಾಯಕತ್ವದಲ್ಲಿ ರಾಜ್ಯ ವಿಧಾನಸಭೆಯು “ಹೊಸ ಇತಿಹಾಸ” ರಚಿಸಲಿದೆ ಎಂದು ಹೇಳಿದರು.

ಉತ್ತರಾಖಂಡ್ ನ ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಪುತ್ರಿ ರಿತು ಖಂಡೂರಿ. ಇತ್ತೀ ಚೆಗಷ್ಟೇ ಮುಕ್ತಾಯಗೊಂಡಿದ್ದ ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ಸಿಂಗ್ ನೇಗಿ ಯನ್ನು 3,687 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.