Tuesday, 10th December 2024

ಇಂದೋರ್’ನಲ್ಲಿ ಗ್ರೀನ್ ಫಂಗಸ್ ಪ್ರಕರಣ ಪತ್ತೆ

ನವದೆಹಲಿ: ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಪ್ರಕರಣಗಳ ಬಳಿಕ ಇದೀಗ ಗ್ರೀನ್ ಫಂಗಸ್ ಎಂಬ ಮತ್ತೊಂದು ಶಿಲೀಂದ್ರ ಸೋಂಕು ಪತ್ತೆಯಾಗಿದೆ.

ಮೊದಲ ಗ್ರೀನ್ ಫಂಗಸ್ ಪ್ರಕರಣ ಮಧ್ಯಪ್ರದೇಶದ ಇಂದೋರ್ ನಲ್ಲಿ ಪತ್ತೆಯಾಗಿದ್ದು ಸೋಂಕಿನಿಂದ ಗುಣಮುಖನಾದ 34 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.ಅರಬಿಂದೋ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯ ಡಾ.ರವಿ ದೋಸಿ, ಹೆಚ್ಚಿನ ಚಿಕಿತ್ಸೆಗಾಗಿ ಸೋಂಕಿತನನ್ನು ಮುಂಬೈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ವ್ಯಕ್ತಿ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರಬಹುದು ಎಂಬ ಶಂಕೆಯಿತ್ತು. ಆದರೆ ಪರೀಕ್ಷೆ ಬಳಿಕ ಗ್ರೀನ್ ಫಂಗಸ್ ಇರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.