Wednesday, 11th December 2024

ಬಿಹಾರ ಚುನಾವಣೆಗೆ ಅಧಿಕಾರಿಯಾಗಿ ’ತೃತೀಯಲಿಂಗಿ ಮಹಿಳೆ’ ನೇಮಕ

ನವದೆಹಲಿ: ಇದೇ ಮೊದಲ ಬಾರಿಗೆ ಲಿಂಗ ಬದಲಾವಣೆಗೊಂಡ ಮಹಿಳೆಯೊಬ್ಬರನ್ನು ಬಿಹಾರ ವಿಧಾನಸಭಾ ಚುನಾವಣೆಗೆ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಮೋನಿಕಾ ದಾಸ್ ನೇಮಕಗೊಂಡ ಅಧಿಕಾರಿ. ಅ.28 ರಂದು ನಡೆಯಲಿರುವ ಚುನಾವಣೆಗೆ ಅಧಿಕಾರಿಯಾಗಿ ನೇಮಕಗೊಂಡಿ ದ್ದಾರೆ. 32 ವರ್ಷದ ಮೋನಿಕಾ ಪಾಟ್ನಾ ವಿವಿಯಲ್ಲಿ ಚಿನ್ನದ ಪದಕ ಗೆದ್ದ ವಿದ್ಯಾರ್ಥಿ. 2015 ರಿಂದ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕೆಲಸ ಮಾಡಿದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಯಾವುದೇ ರಾಜ್ಯದ ಚುನಾವಣೆಯೊಂದರಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿ ಅಧಿಕಾರಿ ಯೊಬ್ಬರನ್ನು ನೇಮಕ ಮಾಡಿರುವ ಐತಿಹಾಸಿಕ ದಾಖಲೆ ಬಿಹಾರ ಹೊಂದಿದೆ. 2016 ರಲ್ಲಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ರಿಯಾ ಸರ್ಕಾರ್ ಎಂಬ ಲಿಂಗ ಪರಿವರ್ತನೆಗೊಂಡ ಮಹಿಳೆಯನ್ನು ಪೊಲೀಂಗ್ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

ದಾಸ್ ಅವರಿಗೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ತರಬೇತಿಗಳನ್ನು ನೀಡಲಾಗುವುದು ಎಂದು ಬಿಹಾರದ ಚುನಾವಣಾ ಆಯುಕ್ತ ಹೆಚ್ ಆರ್ ಶ್ರೀನಿವಾಸ ತಿಳಿಸಿದ್ದಾರೆ. ಬಿಹಾರದಲ್ಲಿ ಲಿಂಗ ಪರಿವರ್ತನೆಗೊಂಡ 2,344 ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ.