Saturday, 14th December 2024

ಫಿಟ್ ಇಂಡಿಯಾ: ವಿರಾಟ್, ರುತುಜಾರೊಂದಿಗೆ ಮೋದಿ ಸಂವಾದ

ನವದೆಹಲಿ: ಫಿಟ್ ಇಂಡಿಯಾ ಅಭಿಯಾನಕ್ಕೆ ಒಂದು ವರ್ಷದ ಪೂರ್ಣವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ವರು ದೇಶಾದ್ಯಂತ ಫಿಟ್ ನೆಸ್ ಪ್ರಮುಖರು ಹಾಗೂ ನಾಗರಿಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಸಂವಾದದಲ್ಲಿ ಭಾಗವಹಿಸಿದ ಪ್ರಮುಖರೊಂದಿಗೆ ಫಿಟ್ ನೆಸ್ ಟಿಪ್ಸ್ ಮತ್ತು ಈ ಕುರಿತ ಅವರ ಹಿನ್ನೆಲೆಗಳನ್ನು ಚರ್ಚಿಸಿ, ಆರೋಗ್ಯಯುತ ಜೀವನ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಕ್ರಿಕೆಟ್‍ ಆಟಗಾರ ವಿರಾಟ್ ಕೊಹ್ಲಿ, ರನ್ನರ್ ಮಿಲಿಂದ್ ಸೋಮನ್, ನ್ಯೂಟ್ರಶನಿಸ್ಟ್ ರುಜುತಾ ದಿವೇಕರ್ ಮತ್ತು ಇತರರು ಈ ಸಂವಾದದಲ್ಲಿ ಪಾಲ್ಗೊಂಡರು.

ಫಿಟ್ ಇಂಡಿಯಾ ಸಂವಾದದಲ್ಲಿಮಧ್ಯಾಹ್ನ 12ಕ್ಕೆ ಪಾಲ್ಗೊಂಡೆ ಎಂದು ಕ್ರಿಕೆಟರ್ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ದಾಲ್ ಚಾವಲ್ ಘೀ ಮುಖ್ಯ ಆಹಾರ ಪದಾರ್ಥಗಳು. ಸೋ, ಫಿಟ್ ಇಂಡಿಯಾ ಅಭಿಯಾನದ ಭಾಗವಾದೆ.  ಪ್ರಧಾನಿಯವ ರೊಂದಿಗೆ ಸಂವಾದ ನಡೆಸಲು ಹಾತೊರೆದಿದ್ದೆ ಎಂದು ರುಜುತಾ ಟ್ವೀಟ್ ಮಾಡಿದ್ದಾರೆ.