Wednesday, 11th December 2024

ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಐದು ಮಂದಿ ಸಾವು

ಮುಂಬೈ : ಮಹಾರಾಷ್ಟ್ರದ ಬೀದ್-ಪಾರ್ಲಿ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಲಾರಿ, ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಐದು ಮಂದಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರೆ, ಇನ್ನಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮತ್ತೊಬ್ಬರು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದರು. ಗಾಯಗೊಂಡವರ ಕೆಲವರು ಬೀಡ್ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದವರನ್ನು ಔರಂಗಾಬಾದ್ ಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಪಘಾತದ ನಂತರ ಲಾರಿ ಚಾಲಕ ಪರಾರಿ ಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೃತರನ್ನು ಬೀದ್ ನಗರದ ಶಾಹು ನಗರದ ನಿವಾಸಿಗಳಾದ ಮದೀನಾ ಪಠಾಣ್ (30), ತಬಸ್ಸುಮ್ ಪಠಾಣ್ (40), ರೆಹಾನ್ ಪಠಾಣ್ (10), ತಮನ್ನಾ ಪಠಾಣ್ (8) ಮತ್ತು ಸರೋ ಸತ್ತಾರ್ ಪಠಾಣ್ (40) ಎಂದು ಗುರುತಿಸಲಾಗಿದೆ.