Friday, 13th December 2024

ಪಂಚರಾಜ್ಯಗಳಲ್ಲಿ ಚುನಾವಣೆ ಬಿರುಸು: ಪುದುಚೇರಿಯಲ್ಲಿ ಅತೀ ಹೆಚ್ಚು, ಕೇರಳದಲ್ಲಿ ಕಡಿಮೆ ಮತದಾನ

ನವದೆಹಲಿ: ನಿರೀಕ್ಷೆಯಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಇತ್ತೀಚಿನ ವರದಿ ಪ್ರಕಾರ, ಅಸ್ಸಾಂನಲ್ಲಿ ಶೇ.33.18, ಕೇರಳ ಶೇ.31.62, ಪುದುಚೇರಿ ಶೇ.35.71, ತಮಿಳುನಾಡು ಶೇ.22.92, ಪಶ್ಚಿಮ ಬಂಗಾಳ ದಲ್ಲಿ ಶೇ.34.71ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ ವರದಿ ತಿಳಿಸಿದೆ.

ಬೆಳಿಗ್ಗೆ 10 ಗಂಟೆಯ ವೇಳೆಗೆ, ಕೇರಳದಲ್ಲಿ ಶೇ15.33 , ತಮಿಳುನಾಡಿನಲ್ಲಿ ಶೇ 6.58, ಪುದುಚೇರಿಯಲ್ಲಿ ಶೇ 6.58, ಪಶ್ಚಿಮ ಬಂಗಾಳದಲ್ಲಿ ಶೇ 14.62 ಮತ್ತು ಅಸ್ಸಾಂನಲ್ಲಿ ಶೇ 12.83 ಮತದಾನವಾಗಿತ್ತು. ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 475 ಮತಕ್ಷೇತ್ರಗಳಿಗೆ ಬಿಗಿಭದ್ರತೆಯಲ್ಲಿ ಮತದಾನ ನಡೆಯುತ್ತಿದೆ

ಬಂಗಾಳ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಇಂದೇ ಚುನಾವಣೆ ಮುಕ್ತಾಯಗೊಳ್ಳಲಿದ್ದು, ಮೇ.2 ರಂದು ಫಲಿತಾಂಶ ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ 94 ವಿಧಾನಸಭಾ ಸ್ಥಾನಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮಾರ್ಚ್ 27, ಏ.1ರಂದು ಮೊದಲ ಮತ್ತು ಎರಡನೇ ಹಂತದಲ್ಲಿ 30-30 ಸ್ಥಾನಗಳಲ್ಲಿ ಎರಡು ಹಂತಗಳ ಮತದಾನ ಪೂರ್ಣ ಗೊಂಡಿದ್ದು ಮಂಗಳವಾರ ಮೂರನೇ ಹಂತದಲ್ಲಿ 31 ಸ್ಥಾನಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily