Wednesday, 11th December 2024

ಎನ್‌ಕೌಂಟರ್‌’ನಲ್ಲಿ 5 ಭಯೋತ್ಪಾದಕರ ಹತ್ಯೆ

ಜಮ್ಮು ಕಾಶ್ಮೀರ: ಪುಲ್ವಾಮಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌’ನಲ್ಲಿ 5 ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಈ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ ಇಟಿ ನಿಶಾಜ್ ಲೋನ್ʼನ ಜಿಲ್ಲಾ ಕಮಾಂಡರ್ ಮತ್ತು ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಸೇರಿ ಒಟ್ಟು ಐವರು ಭಯೋತ್ಪಾದಕರನ್ನ ಹೊಡೆದುರುಳಿಸಲಾಗಿದೆ ಎಂದು ಐಜಿಪಿ ಕಾಶ್ಮೀರವಿಜಯ್ ಕುಮಾರ್ ತಿಳಿಸಿದ್ದಾರೆ.