Friday, 13th December 2024

ಸರಕು ವಿಭಾಗದಲ್ಲಿ ಬೆಂಕಿ: ಕರಾಚಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಕತಾರ್ ಏರ್‍ವೇಸ್‍ನ ವಿಮಾನದ ಸರಕು ವಿಭಾಗದಲ್ಲಿ ಬೆಂಕಿ ಕಾಣಿಸಿ ದಟ್ಟ ಹೊಗೆ ಆವರಿಸಿ, ತುರ್ತು ಪರಿಸ್ಥಿತಿಯನ್ನು ಘೋಷಿಸಿ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.

ಕತಾರ್ ಏರ್ವೇಸ್‍ನ ವಿಮಾನ -579 ದೆಹಲಿಯಿಂದ ದೋಹಾಗೆ ತೆರಳುವಾಗ ಹೊಗೆಯ ಸೂಚನೆ ಬಂದಿದೆ ಎಂಬುದರ ಕುರಿತು ತಕ್ಷಣ ಪೈಲಟ್ ತುರ್ತು ಸಂದೇಶ ನೀಡಿದರು ಎನ್ನಲಾಗಿದೆ. ನಂತರ ವಿಮಾನವನ್ನು ಕರಾಚಿಗೆ ತಿರುಗಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ವಿಮಾನವು ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಪ್ರಯಾಣಿಕರನ್ನು ಕ್ರಮಬದ್ಧವಾಗಿ ಇಳಿಸಿ ಬದಲಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 200 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.