Saturday, 12th October 2024

ಉಕ್ರೇನ್ – ರಷ್ಯಾ ಉದ್ವಿಗ್ನತೆ ಹೆಚ್ಚಳ: ವಿಮಾನಗಳ ಹಾರಾಟಕ್ಕಿದ್ದ ನಿರ್ಬಂಧ ಕಡಿತ

ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಉಕ್ರೇನ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಸಂಖ್ಯೆಯ ಮೇಲಿನ ನಿರ್ಬಂಧ(ಏರ್ ಬಬಲ್ ವ್ಯವಸ್ಥೆ) ತೆಗೆದು ಹಾಕಲು ಕೇಂದ್ರ ನಿರ್ಧರಿಸಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ.

ಪ್ರಸ್ತುತ 35 ದೇಶಗಳೊಂದಿಗೆ ಏರ್ ಬಬಲ್ ವ್ಯವಸ್ಥೆಗಳನ್ನು ಹೊಂದಿದೆ. ಏರ್ ಬಬಲ್ ವ್ಯವಸ್ಥೆಯಲ್ಲಿ ಭಾರತ-ಉಕ್ರೇನ್ ನಡುವಿನ ವಿಮಾನಗಳು ಮತ್ತು ಆಸನಗಳ ಸಂಖ್ಯೆಯ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದೆ. ಬೇಡಿಕೆಯ ಹೆಚ್ಚಳದ ಕಾರಣದಿಂದ ವಿಮಾನಗಳನ್ನು ಆರೋಹಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.

ಬುಧವಾರ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ‘ಶಾಂತತೆಯನ್ನು ಕಾಪಾಡಿಕೊಳ್ಳಿ ಮತ್ತು ಭಯಭೀತರಾಗಬೇಡಿ’ ಎಂದು ಕೇಳಿಕೊಂಡಿದೆ.