ನವದೆಹಲಿ/ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಏರಿಳಿತಗಳ ನಡುವೆ ಸಮತಟ್ಟಾಗಿ ಮುಂದುವರಿದಿದೆ. ಷೇರುಪೇಟೆ ಸೆನ್ಸೆಕ್ಸ್ 28 ಅಂಕಗಳು ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 36.40 ಅಂಕಗಳು ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 28.35 ಪಾಯಿಂಟ್ ಹೆಚ್ಚಾಗಿ 48,832.03 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 36.40 ಪಾಯಿಂಟ್ ಹೆಚ್ಚಾಗಿ 14,617.90 ಪಾಯಿಂಟ್ಸ್ ತಲುಪಿದೆ. 152 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಜೆಎಸ್‌ಡಬ್ಲ್ಯೂ ಸ್ಟೀಲ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಲಾರ್ಸೆನ್ ಮತ್ತು ಟೌಬ್ರೊ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿದೆ. ಇಂದು ಹಣಕಾಸು ಸಂಬಂಧಿತ ಷೇರುಗಳನ್ನು ಹೊರತುಪಡಿಸಿ ಬಹುತೇಕ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ಲಾಭವನ್ನು ವಿಸ್ತರಿಸಿ ದಿನದ ಗರಿಷ್ಠ 74.35 ರೂಪಾಯಿಗೆ ಕೊನೆಗೊಂಡಿತು.