Wednesday, 18th September 2024

ಕೇಂದ್ರ ಬಜೆಟ್​ ಮಂಡನೆ: ರಾಷ್ಟ್ರಪತಿಯನ್ನು ಭೇಟಿಯಾದ ಸಚಿವೆ

ನವದೆಹಲಿ : ಸಂಸತ್ತಿನ ಬಜೆಟ್​ ಅಧಿವೇಶನ ಪ್ರಾರಂಭವಾಗಿದ್ದು, ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ನಾಲ್ಕನೇ ಕೇಂದ್ರ ಬಜೆಟ್​ ಮಂಡನೆ ಮಾಡಲಿದ್ದಾರೆ.

ಲೋಕಸಭೆಯಲ್ಲಿ 2022-23ನೇ ಸಾಲಿನ ಆಯವ್ಯಯ ಮುಂಗಡ ಪತ್ರವನ್ನು ಮಂಡನೆ ಮಾಡಿದ ಒಂದು ತಾಸಿನಲ್ಲಿ, ನಿರ್ಮಲಾ ಸೀತಾರಾಮನ್​ ಅವರು ರಾಜ್ಯಸಭೆಯಲ್ಲೂ ಪ್ರಸ್ತುತ ಪಡಿಸುವರು. ಆದಾಯ ಮತ್ತು ಖರ್ಚುಗಳ ಮಾಹಿತಿ ನೀಡಲಿದ್ದಾರೆ.

ದೆಹಲಿಯ ನಾರ್ತ್​ ಬ್ಲಾಕ್​​ನಲ್ಲಿರುವ ಹಣಕಾಸು ಸಚಿವಾಲಯದ ಕಚೇರಿ ತಲುಪಿರುವ ನಿರ್ಮಲಾ ಸೀತಾರಾಮನ್​, ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ್ದಾರೆ. ಬಳಿಕ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ ಕೋವಿಂದ್​ರನ್ನು ಭೇಟಿಯಾದರು.