Saturday, 14th December 2024

ಎಂಎಲ್ಎಗೆ ಬಿತ್ತು ಚಪ್ಪಲಿ ಏಟು

ತೆಲಂಗಾಣ: ತೆಲಂಗಾಣದ ಇಬ್ರಾಹಿಂಪಟ್ಟಣಂ ಶಾಸಕನ ಮೇಲೆ ಚಪ್ಪಲಿ ತೂರಾಟ ನಡೆದಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಮಸ್ಯೆಯನ್ನು ಖುದ್ದಾಗಿ ಕಾಣಲು ಸ್ಥಳೀಯ ಶಾಸಕರು ಬಾರದ ಹಿನ್ನೆಲೆಯಲ್ಲಿ ಜನರು ಆಕ್ರೋಶ ಹೊರಹಾಕಿದ್ದಾರೆ. ಮಳೆ ಸಂತ್ರಸ್ಥರನ್ನು ಮರೆತ ಶಾಸಕನಿಗೆ ಬೆಂಡೆತ್ತಿದ ಜನರು, ಶಾಸಕ ಮಂಚಿರೆಡ್ಡಿ ಮೇಲೆ ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ರೌದ್ರಾವತಾರ ಕಂಡು ಟಿಆರ್’ಎಸ್ ಶಾಸಕ ಮಂಚಿರೆಡ್ಡಿ ಕೃಷ್ಣರೆಡ್ಡಿ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ.