ತೆಲಂಗಾಣ: ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಭಾರೀ ವಿರೋಧ ವ್ಯಕ್ತವಾಗು ತ್ತಿದೆ.
ತೆಲಂಗಾಣದಲ್ಲಿ ಉಚಿತ ಬಸ್ ಪ್ರಯಾಣದಿಂದ ಆಟೋ ಹಾಗೂ ಕ್ಯಾಬ್ ಚಾಲಕರ ಬದುಕು ಬೀದಿಗೆ ಬಿದ್ದಿದೆ. ದುಡಿಮೆ ಇಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಆಕ್ರೋಶಗೊಂಡ ಚಾಲಕನೋರ್ವ ತನ್ನ ಆಟೋಗೆ ಬೆಂಕಿ ಇಟ್ಟು ಕಣ್ಣೀರು ಸುರಿಸಿದ್ದಾರೆ.
ಜ್ಯೋತಿರಾವ್ ಫುಲೆ ಪ್ರಜಾ ಭವನದ ಬಳಿ ಆಟೋಗೆ ಬೆಂಕಿ ಇಟ್ಟು ಆಕ್ರೋಶ ಹೊರ ಹಾಕಿರುವ ಚಾಲಕ, ಉಚಿತ ಬಸ್ ಯೋಜನೆಯಿಂದ ನಮ್ಮ ಜೀವನ ಬರ್ಬಾದ್ ಆಗಿದೆ. ಸಾಕಷ್ಟು ಆಟೋ ಚಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಯೋಜನೆ ನಮ್ಮ ಬದುಕನ್ನೇ ಸರ್ವನಾಶ ಮಾಡುತ್ತಿದೆ. ತಕ್ಷಣ ಯೋಜನೆ ನಿಲ್ಲಿಸಿ ಎಂದು ಅಂಗಲಾಚಿದ್ದಾನೆ.
ಕೆಲ ದಿನಗಳ ಹಿಂದೆ ಆಟೋ ಚಾಲಕನೋರ್ವ ತೆಲಂಗಾಣದ ಸರ್ಕಾರಿ ಬಸ್ನಲ್ಲಿ ಭಿಕ್ಷೆ ಬೇಡಿದ್ದ. ಇನ್ನು ತೆಲಂಗಾಣ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಆಟೋ ಚಾಲಕರಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಲಾಗಿತ್ತು.