Friday, 13th December 2024

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ…ಇಂತಿದೆ ವಿವರ..

#Petrol #Diesel

ನವದೆಹಲಿ: ಸತತ ಐದನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.

ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 107.46 ರೂ. ಇದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 98.15 ರೂ. ಆಗಿದೆ.

ಮುಂಬೈನಲ್ಲಿ, ಪ್ರತಿ ಲೀಟರ್‌ಗೆ 109.83 ರೂ.ಗೆ, ಡೀಸೆಲ್ ಬೆಲೆ 100 ರೂ .29, ಒಂದು ಲೀಟರ್‌ಗೆ 37 ಪೈಸೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ರೂ 101.37, ಅಂದರೆ 36 ಪೈಸೆ ಹೆಚ್ಚಳ, ಡೀಸೆಲ್ ಬೆಲೆ ರೂ. 96.93 ಇದ್ದು, 33 ಪೈಸೆ ಏರಿಕೆಯಾಗಿದೆ.

ಶನಿವಾರ ನವದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 32 ಪೈಸೆ ಏರಿಕೆಗೊಂಡು 107.46 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 38 ಪೈಸೆ ಹೆಚ್ಚಾಗಿ 98.15 ರೂಪಾಯಿಗೆ ಮುಟ್ಟಿದೆ.