Friday, 13th December 2024

10ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಜನರ ಅಸಮಾಧಾನ ಮತ್ತು ಪ್ರತಿಪಕ್ಷಗಳ ತೀವ್ರ ಟೀಕೆಗಳ ನಡುವೆಯೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ 10ನೇ ದಿನವೂ ಏರಿಕೆಯಾಗಿದೆ.

ಗುರುವಾರ ಪೆಟ್ರೋಲ್ ದರ ಲೀಟರ್ ಗೆ 34 ಪೈಸೆ, ಡೀಸೆಲ್ ದರ ಲೀಟರ್ ಗೆ 32 ಪೈಸೆಯಷ್ಟು ಏರಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 89 ರೂಪಾಯಿ 88 ಪೈಸೆಯಷ್ಟಿದೆ. ಡೀಸೆಲ್ ದರ 32 ಪೈಸೆ ಏರಿಕೆಯಾಗಿ 80 ರೂಪಾಯಿ 27 ಪೈಸೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ ಇಂದು 92 ರೂಪಾಯಿ 54 ಪೈಸೆಯಷ್ಟಿ ದ್ದರೆ, ಡೀಸೆಲ್ ಬೆಲೆ 85 ರೂಪಾಯಿ 07 ಪೈಸೆಯಷ್ಟಾಗಿದೆ.