Wednesday, 11th December 2024

ತೈಲ ಬೆಲೆ ಏರಿಕೆ: ಬೆಂಗಳೂರಿನಲ್ಲಿ ಹೀಗಿದೆ ಪೆಟ್ರೋಲ್‌ ದರ

ನವದೆಹಲಿ: ಸತತ 12ನೇ ದಿನ ಶನಿವಾರವೂ ತೈಲ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 37 ಪೈಸೆ ಏರಿಕೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನ ಹರಿಸದೇ ಇರುವುದರಿಂದ ಜನರು ಆಕ್ರೋಶಗೊಂಡಿದ್ದಾರೆ. ಶನಿವಾರ ಲೀಟರ್ ಗೆ 37 ಪೈಸೆ ಏರಿಕೆಯಾಗಿದ್ದರಿಂದ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 90.58 ರೂ. ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 80.97 ರೂ.ಗೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 93.67ರೂ.(1.30 ರೂ.ನಷ್ಟು ಏರಿಕೆ) ಗೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 85.84 ರೂ.ಗೆ ಏರಿದೆ. ಮುಂಬೈನಲ್ಲಿ 97 ರೂ. ಡೀಸೆಲ್ 87.06 ರೂ.ಗೆ ಏರಿಕೆಯಾಗಿದೆ.