Saturday, 23rd November 2024

ಸೆನ್ಸೆಕ್ಸ್‌ ನಲ್ಲಿ ಜಿಗಿತ, ಕಚ್ಚಾ ತೈಲ -ಪ್ರತಿ ಬ್ಯಾರೆಲ್‌ಗೆ 131 ಡಾಲರ್‌

ಮುಂಬೈ: ರಾಷ್ಟ್ರೀಯ ಷೇರುಪೇಟೆಯಲ್ಲಿ ಬುಧವಾರ ದಿನದ ಆರಂಭದಲ್ಲೇ ಸೆನ್ಸೆಕ್ಸ್‌ ನಲ್ಲಿ ಭಾರಿ ಅಂಕಗಳ ಜಿಗಿತ ಕಂಡಿದೆ.

ಸೆನ್ಸೆಕ್ಸ್‌ 444.51 ಕಂಡು 53,868 ರಲ್ಲಿ ಹಾಗೂ ನಿಫ್ಟಿ 117 ಅಂಶಗಳನ್ನು ಹೆಚ್ಚಿಸಿ ಕೊಂಡು 16,130ರಲ್ಲಿ ವಹಿವಾಟು ನಡೆಸುತ್ತಿದೆ.

ಮತ್ತೊಂದೆಡೆ ಪವರ್ ಗ್ರಿಡ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಆರಂಭಿಕ ವಹಿವಾಟಿ ನಲ್ಲಿ ನಷ್ಟದಲ್ಲಿವೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಶೇ. 2.61 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 131 ಡಾಲರ್‌ಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 22 ಪೈಸೆ ಏರಿಕೆ ಕಂಡು 76.78 ರೂಪಾಯಿಯಲ್ಲಿ ಇದೆ. ರಷ್ಯಾ – ಉಕ್ರೇನ್ ಬಿಕ್ಕಟ್ಟಿನಿಂದಾಗಿ ಮಾರುಕಟ್ಟೆ ಅಸ್ಥಿರತೆಯಿಂದಾಗಿ ಜಾಗತಿಕ ಷೇರುಗಳಲ್ಲಿನ ಬೆಳವಣಿಗೆ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ಹಾಗೂ ಕಚ್ಚಾ ತೈಲ ಬೆಲೆಗಳ ಏರಿಕೆಯಾಗಿದೆ.