Wednesday, 11th December 2024

ಸಾಮೂಹಿಕ ಅತ್ಯಾಚಾರ: ಇಬ್ಬರು ಅಪ್ರಾಪ್ತರ ಬಂಧನ

ಮುಂಬೈ: ಮಹಿಳೆಯೊಬ್ಬರ ಸಾಮೂಹಿಕ ಅತ್ಯಾಚಾರ ಪ್ರಕರಣ(ಜನವರಿ 21)ಕ್ಕೆ ಸಂಬಂಧಿಸಿ, ಇಬ್ಬರು ಅಪ್ರಾಪ್ತರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಕೃತ್ಯದಲ್ಲಿ ನಾಲ್ವರು ಭಾಗಿಯಾಗಿದ್ದರೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಇಬ್ಬರನ್ನ ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.

ಜ.21ರಂದು ಮುಂಬೈನಲ್ಲಿ ಮಹಿಳೆಯೊಬ್ಬರ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸ ಗಿದ್ದಾರೆ. ಸಂತ್ರಸ್ತ ಮಹಿಳೆ ಕೇಟರಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸ ಮುಗಿಸಿ ಕೊಂಡು ಮಹಿಳೆ ಮನೆಗೆ ತೆರಳುತ್ತಿದ್ದಾಗ ಪರಿಚಯವಿದ್ದ ಆರೋಪಿಯೊಬ್ಬ ಆಕೆಯನ್ನ ತಡೆದು ಯಾಕೆ ತಡವಾಗಿ ಮನೆಗೆ ಹಿಂದಿ ರುಗುತ್ತಿದ್ದಿಯಾ ಎಂದು ವಿಚಾರಿಸಿದ್ದಾನೆ. ಇದೇ ವೇಳೆ ಮತ್ತೊಬ್ಬ ಆಕೆಯನ್ನು ಜೊತೆಗೆ ಬರುವೆಯಾ ಎಂದು ಪ್ರಶ್ನಿಸಿ, ಬಲವಂತವಾಗಿ ಕೋಣೆಗೆ ಎಳೆದೊಯ್ದು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.

ಮಹಿಳೆಯು ಜೋರಾಗಿ ಕಿರುಚಿ ಜನರನ್ನ ಎಚ್ಚರಿಸಲು ಪ್ರಯತ್ನಿಸಿದಾಗ ಇನ್ನೊಬ್ಬನು ಇವರೊಂದಿಗೆ ಸೇರಿಕೊಂಡು, ಅವಳ ಬಾಯಿಯನ್ನು ಬಿಗಿದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯ ಎಸಗಿದ ಬಳಿಕ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ನಂತರ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ನೀಡಿದ ವಿವರಣೆಯನ್ನು ಬಳಸಿಕೊಂಡು ಎಲ್ಲಾ ನಾಲ್ವರು ಆರೋಪಿ ಗಳ ಐಡೆಂಟಿಟಿ ಕಂಡುಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳು ಕಸ್ಟಡಿಯಲ್ಲಿದ್ದಾರೆ.