Saturday, 14th December 2024

ಗಂಗಾ ನದಿ ಮಾಲಿನ್ಯದ ಮೇಲ್ವಿಚಾರಣೆ ಸಮಿತಿ ಅವಧಿ ವಿಸ್ತರಣೆ

ನವದೆಹಲಿ: ಗಂಗಾ ನದಿ ಮಾಲಿನ್ಯದ ಮೇಲ್ವಿಚಾರಣೆ ಮತ್ತು ಉತ್ತರ ಪ್ರದೇಶದಲ್ಲಿ ಪರಿಸರ ನಿಯಮಗಳನ್ನ ಪಾಲಿಸುವ ಮೇಲ್ವಿ ಚಾರಣೆಗಾಗಿ ಮೇಲುಸ್ತುವಾರಿ ಸಮಿತಿಯ ಅವಧಿಯನ್ನ ವಿಸ್ತರಿಸಲಾಗಿದೆ.

ಉತ್ತರ ಪ್ರದೇಶ ಸರ್ಕಾರ ಪರಿಣಾಮಕಾರಿ ಪರ್ಯಾಯ ವ್ಯವಸ್ಥೆ ರೂಪಿಸದ ಹೊರತು ಸಮಿತಿಯನ್ನು ಏಕಾಏಕಿ ಮುಚ್ಚುವುದು ಸೂಕ್ತವಲ್ಲ ಎಂದು ಎನ್ ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪೀಠ ಹೇಳಿದೆ.

ಮೇಲುಸ್ತುವಾರಿ ಸಮಿತಿಯ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಲಾಗುವುದು. ಈ ವಿಚಾರದಲ್ಲಿ ಬೇರೆ ಯಾವುದೇ ಸಲಹೆ ಇದ್ದರೆ ಅದನ್ನ ಮುಂದಿಡಲು ಮುಕ್ತ ಅವಕಾಶ ಇದೆ ಎಂದಿದೆ.

ಹೈಕೋರ್ಟ್ʼನ ನಿವೃತ್ತ ನ್ಯಾಯಮೂರ್ತಿ ಎಸ್ ವಿಎಸ್ ರಾಥೋಡ್ ನೇತೃತ್ವದ ಮೇಲುಸ್ತುವಾರಿ ಸಮಿತಿಯ ಅವಧಿಯನ್ನ ಆರು ತಿಂಗಳ ಕಾಲ ವಿಸ್ತರಿಸಲಾಗಿತ್ತು ಎಂದು ನ್ಯಾಯಮಂಡಳಿಯು ಹೇಳಿದೆ.

ಗಂಗಾ ನದಿ ಮಾಲಿನ್ಯ, ಹಿಂಡನ್ ನದಿ ಪುನಶ್ಚೇತನ, ಅಲಹಾಬಾದ್ʼನಲ್ಲಿ ಮರಳು ಗಣಿಗಾರಿಕೆ, ಸಿಂಗ್ರೌಲಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಮಾಲಿನ್ಯ, ರಾಮಗಢ ಸರೋವರ ಮತ್ತು ಗೋರಖಪುರದ ಅಮಿ ನದಿ ಮಾಲಿನ್ಯ, ಘನ ಮತ್ತು ಜೈವಿಕ ತ್ಯಾಜ್ಯ ನಿರ್ವಹಣಾ ಮಾನದಂಡಗಳನ್ನ ಪರಿಶೀಲಿಸಲು ನ್ಯಾಯಮಂಡಳಿ ನೇಮಿಸಿದ್ದ ಹಿಂದಿನ ಸಮಿತಿಗಳನ್ನು ಈ ಮೇಲುಸ್ತುವಾರಿ ಸಮಿತಿ ಬದಲಿಸಿದೆ.