Wednesday, 11th December 2024

ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ ಅನಿಲ ಸೋರಿಕೆ: ಎಂಟು ಕಾರ್ಮಿಕರು ಅಸ್ವಸ್ಥ

ಭುವನೇಶ್ವರ: ಒಡಿಶಾದ ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನಲ್ಲಿ (ಆರ್‌ಎಸ್‌ಪಿ) ಸೋಮವಾರ ಅನಿಲ ಸೋರಿಕೆಯಿಂದ ಎಂಟು ಮಂದಿಕಾರ್ಮಿಕರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಉಕ್ಕಿನ ಸ್ಥಾವರ ಇದಾಗಿದ್ದು, ಬ್ಲಾಸ್ಟ್ ಫರ್ನೇಸ್ 5ರಲ್ಲಿ ಅನಿಲ ಸೋರಿಕೆಯಾಗಿದೆ. ಉಸಿರಾಟದ ತೊಂದರೆಯಿಂದ ಅಸ್ವಸ್ಥರಾದ ವರನ್ನು ತಕ್ಷಣ ಇಸ್ಪತ್ ಜನರಲ್ ಆಸ್ಪತ್ರೆಗೆ (ಐಜಿಹೆಚ್) ಕಳುಹಿಸಲಾಗಿದೆ ಎಂದು ಆರ್‌ಎಸ್‌ಪಿಯ ಉಸ್ತುವಾರಿ ನಿರ್ದೇಶಕ ಅತಾನು ಭೌಮಿಕ್ ಹೇಳಿದ್ದಾರೆ.

ಅವರಲ್ಲಿ ಕಾರ್ಯನಿರ್ವಾಹಕ, ಹಿರಿಯ ಮೇಲ್ವಿಚಾರಕ, ಇನ್ನೊಬ್ಬ ಆರ್‌ಎಸ್‌ಪಿ ಉದ್ಯೋಗಿ ಮತ್ತು ಕೆಲವು ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ.

ಗ್ಯಾಸ್ ಪೈಪ್ ಸಂಪರ್ಕಕ್ಕಾಗಿ ಕಾಮಗಾರಿ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.