Wednesday, 11th December 2024

ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ಜ.ಎಂ.ಎಂ.ನರವಣೆ ಅಧಿಕಾರ ಸ್ವೀಕಾರ

M M Naravane

ನವದೆಹಲಿ: ಜ.ಎಂ.ಎಂ.ನರವಣೆ ಅವರು ಭಾರತೀಯ ಸೇನಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥ ಹುದ್ದೆಯಾದ ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಅಧಿಕಾರ ವಹಿಸಿಕೊಂಡಿದ್ದಾರೆ.

ಜ.ಬಿಪಿನ್‌ ರಾವತ್‌ ಸಾವಿನ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನರವಣೆ ಅವರನ್ನು ನೇಮಕ ಮಾಡಲಾಗಿದೆ. ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಸೃಷ್ಟಿಗೂ ಮುನ್ನ ಈ ಹುದ್ದೆ ಇತ್ತು.

ಸೇನೆ, ನೌಕಾಪಡೆ ಮತ್ತು ವಾಯಪಡೆಯ ಮುಖ್ಯಸ್ಥರ ಪೈಕಿ ಅತ್ಯಂತ ಹಿರಿಯರು ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ನಿಯುಕ್ತಿಗೊಳ್ಳುತ್ತಿದ್ದರು. ಈ ಹಿಂದೆ ಬಿಪಿನ್‌ ರಾವತ್‌ ಅವರು ಈ ಹುದ್ದೆ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಎರಡನ್ನೂ ನಿರ್ವಹಿಸುತ್ತಿದ್ದರು.

ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಬಿಪಿನ ರಾವತ್ ಅವರನ್ನು 2019ರಲ್ಲಿ ಮೂರು ಸೇನೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಸರಿ ಸುಮಾರು 2 ವರ್ಷಗಳ ಕಾಲ ಸಿಓಎಎಸ್ ಆಗಿ ಸೇವೆ ಸಲ್ಲಿಸಿದ ಎಂಎಂ ನರವಣೆ ಇದೀಗ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಬಡ್ತಿ ಪಡೆದಿದ್ದಾರೆ.