Friday, 13th December 2024

ಉನ್ನಾವೋದಲ್ಲಿ ಗಂಭೀರ ಪ್ರಕರಣ: ಪ್ರಜ್ಞಾಹೀನ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯರು ಪತ್ತೆ

ಉನಾವೋ: ಉತ್ತರ ಪ್ರದೇಶದ ಉನಾವೋದಲ್ಲಿ ಮತ್ತೊಂದು ಭೀಕರ ಅತ್ಯಾಚಾರ ನಡೆದಿದೆ.

ಮೇವು ಸಂಗ್ರಹಿಸಲು ಹೋದ ಮೂವರು ಅಪ್ರಾಪ್ತ ದಲಿತ ಬಾಲಕಿಯರು ಹೊಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣ ಸಿಕ್ಕಿದ್ದಾರೆ. ಇಬ್ಬರು ಬಾಲಕಿಯರು ಆಸ್ಪತ್ರೆಯಲ್ಲಿ ಮೃತಪಟ್ಟರೆ. ಮೂರನೇ ಸ್ಥಿತಿ ಗಂಭಿರವಾಗಿದೆ.

ಎಸ್ಪಿ ಉನ್ನಾ ಆನಂದ ಕುಲಕರ್ಣಿ ಮಾತನಾಡಿ, ಇಬ್ಬರು ಬಾಲಕಿಯರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಒಬ್ಬಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯರು ಹುಲ್ಲು ಕತ್ತರಿಸಲು ಹೋಗಿದ್ದರು. ವಿಷ ಸೇವನೆಯ ಲಕ್ಷಣಗಳು ಇವೆ ಎಂದು ವೈದ್ಯರು ಹೇಳುತ್ತಾರೆ. ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ತನಿಖೆಗಾಗಿ ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಮರಣೋತ್ತರ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಪೊಲೀಸರು ಗ್ರಾಮಸ್ಥರು ಮತ್ತು ಮೂವರು ಉನ್ನಾವೋ ಬಾಲಕಿಯರ ಕುಟುಂಬಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.