Tuesday, 10th December 2024

Glowing Skin: ಅರಿಶಿನ ನೀರು ಮತ್ತು ನಿಂಬೆ ನೀರು;  ಹೊಳೆಯುವ ಚರ್ಮಕ್ಕೆ ಯಾವುದು ಉತ್ತಮ?

Glowing Skin

ಕಾಂತಿಯುತ ಚರ್ಮ ಬೇಕೆಂದರೆ ನಾವು ಸೇವಿಸುವ ಆಹಾರವೂ ಕೂಡ ಅಷ್ಟೇ ಒಳ್ಳೆದಿರಬೇಕು.ಕೆಲವೊಂದು ಆರೋಗ್ಯಕರವಾದ ಪಾನೀಯಗಳನ್ನು ಸೇವಿಸುವುದರಿಂದ ನಮ್ಮ ಮುಖದ ಕಾಂತಿಯೂ ಹೆಚ್ಚಾಗುತ್ತದೆ. ಅವುಗಳಲ್ಲಿ  ನಿಂಬೆ ನೀರು ಮತ್ತು ಅರಿಶಿನ ನೀರು ಹೆಚ್ಚು ಮನೆಮಾತಾಗಿರುವ ಪಾನೀಯಗಳಾಗಿವೆ. ಪ್ರತಿ ಪಾನೀಯವು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ ಆದರೆ ಇವೆರಡರಲ್ಲಿ ಯಾವುದು ಹೊಳೆಯುವ ಚರ್ಮವನ್ನು (Glowing Skin) ಪಡೆಯಲು ಪ್ರಯೋಜನಕಾರಿ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಅದರ ಬಗ್ಗೆ ತಿಳಿದುಕೊಳ್ಳಿ.

Glowing Skin

ನಿಂಬೆ ನೀರು

ನಿಂಬೆ ನೀರು ವಿಟಮಿನ್ ಸಿ, ಆ್ಯಂಟಿ ಆಕ್ಸಿಡೆಂಟ್‍ಗಳು ಮತ್ತು ಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿದೆ. ಇದು ಕಾಲಜನ್ ಉತ್ಪಾದಿಸಲು, ಚರ್ಮವನ್ನು ಸರಿಪಡಿಸಲು ಮತ್ತು ಫ್ರೀ ರಾಡಿಕಲ್‍ಗಳಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಂಬೆ ನೀರಿನಲ್ಲಿ ಹೆಚ್ಚಿನ ವಿಟಮಿನ್ ಸಿ ಇರುವುದರಿಂದ, ಇದು ಚರ್ಮದ ಟೋನ್ ಅನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತದೆ. ಮತ್ತು ಚರ್ಮದಲ್ಲಿರುವ ವಿಷದ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣವು ಮೊಡವೆಗೆ ಕಾರಣವಾಗುವ ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತದೆ.

Glowing Skin

ಅರಿಶಿನದ ನೀರು

ಅರಿಶಿನದಲ್ಲಿ ಅತ್ಯಂತ ಪ್ರಬಲವಾದ ಕರ್ಕ್ಯುಮಿನ್ ಅಂಶವಿದೆ.  ಇದು ಉರಿಯೂತವನ್ನು ಉಂಟುಮಾಡುವ ಫ್ರಿ ರಾಡಿಕಲ್‍ಗಳನ್ನು ತಡೆಯುತ್ತದೆ. ಅಲ್ಲದೇ  ಕರ್ಕ್ಯುಮಿನ್ ಒಂದು ಆ್ಯಂಟಿಆಕ್ಸಿಡೆಂಟ್‍ ಆಗಿದ್ದು, ಇದು  ಚರ್ಮದ ಮೇಲೆ ವಯಸ್ಸಾಗುವಿಕೆಗೆ ಕಾರಣವಾಗುವ ಆಕ್ಸಿಡೇಟಿವ್ ಒತ್ತಡವನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಇದು ನಿಮ್ಮ ಚರ್ಮಕ್ಕೆ  ಯೌವನದ ಹೊಳಪನ್ನು ನೀಡುತ್ತದೆ. ಅರಿಶಿನ ನೀರಿನ ಉರಿಯೂತ ನಿವಾರಕ ಗುಣವು ಚರ್ಮದ ಮೇಲಿನ ಕೆಂಪಾಗುವಿಕೆ, ಊತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದು ಮೊಡವೆ ಮತ್ತು ಎಸ್ಜಿಮಾದಂತಹ ಸಮಸ್ಯೆಗಳನ್ನು ದೂರಮಾಡುತ್ತದೆ. ನಿಯಮಿತವಾಗಿ ಅರಿಶಿನ ನೀರಿನ ಸೇವನೆಯು ಕಪ್ಪು ಕಲೆಗಳು ಮತ್ತು ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುತ್ತದೆ.

ಹೊಳೆಯುವ ಚರ್ಮಕ್ಕಾಗಿ

ನಿಂಬೆ ನೀರು ಮತ್ತು ಅರಿಶಿನ ನೀರು ಎರಡೂ ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತವೆ, ಆದರೆ ಅವು ಚರ್ಮದ ಪ್ರಕಾರಕ್ಕೆ ಸರಿಹೊಂದುವಂತಹ ಪಾನೀಯಗಳಾಗಿವೆ. ಹಾಗಾಗಿ ಎಣ್ಣೆಯುಕ್ತ ಮತ್ತು ಮೊಡವೆಗಳ ಸಮಸ್ಯೆ ಇರುವವರಿಗೆ ನಿಂಬೆ ನೀರು ಉಪಯುಕ್ತವಾಗಿದೆ ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಒಣ ಮತ್ತು ಸೂಕ್ಷ್ಮ ಚರ್ಮದ ಪ್ರಕಾರಕ್ಕೆ  ಅರಿಶಿನ ನೀರು ಹೆಚ್ಚು ಉಪಯುಕ್ತವಾಗಿದೆ. ಇದು ಸೂಕ್ಷ್ಮ ಚರ್ಮದಲ್ಲಿ ಕಿರಿಕಿರಿ ಮತ್ತು ಕೆಂಪಾಗುವಿಕೆಯನ್ನು ಕಡಿಮೆ ಮಾಡಲು ರೋಗಿಗಳಿಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹೆಂಡತಿಯನ್ನು ಅತಿಥಿಗಳ ಜತೆ ಮಲಗಲು ಕಳುಹಿಸುವುದೇ ಈ ಬುಡಕಟ್ಟು ಸಮುದಾಯದ ಶ್ರೇಷ್ಠ ಸಂಪ್ರದಾಯ

ಹಾಗಾಗಿ ನಿಮ್ಮ ಚರ್ಮದ ಪ್ರಕಾರಗಳಿಗೆ ಸರಿ ಹೊಂದುವಂತಹ ಪಾನೀಯಗಳನ್ನು ಸೇವಿಸಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.