Saturday, 14th December 2024

ಸರ್ಕಾರದ ಕೆಲಸಗಳಿಗೆ ಅನುಭವಿಗಳಿಗೆ ಆದ್ಯತೆ ನೀಡಿ: ಗೋವಾ ಮುಖ್ಯಮಂತ್ರಿ

ಪಣಜಿ: ಒಂದು ವರ್ಷದವರೆಗೆ ಕೆಲಸದ ಅನುಭವವಿದ್ದರೆ, ಸರ್ಕಾರದ ಕೆಲಸಗಳಿಗೆ ಹೆಚ್ಚು ಉಪಯುಕ್ತವಾಗುತ್ತದೆ. ರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ವರ್ಷ ಕೆಲಸದ ಅನುಭವವನ್ನು ಕಡ್ಡಾಯಗೊಳಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಕೌಶಲಯುಕ್ತ ಸಂಪನ್ಮೂಲದಿಂದ ಹೆಚ್ಚು ದಕ್ಷತೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ. ಉತ್ತರ ಗೋವಾದ ತೆಲೀಗೋವಾ ಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.

ಸಿಬ್ಬಂದಿ ಆಯ್ಕೆ ಆಯೋಗದ ಮೂಲಕವೇ ಸರ್ಕಾರಿ ನೇಮಕಾತಿಗಳನ್ನು ಕಡ್ಡಾಯ ಗೊಳಿಸುವ ನಿರ್ಧಾರವನ್ನು ಕೂಡ ಕೈಗೊಳ್ಳ ಬೇಕಾದ ಅಗತ್ಯವಿದೆ. ಜತೆಗೇ, ಯಾರಿಗೆ ಸರ್ಕಾರಿ ಉದ್ಯೋಗ ಬೇಕೋ ಅವರು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು ಎಂದು ಸಿಎಂ ಹೇಳಿದ್ದಾರೆ.

ಫ್ರೆಶ್ ಕ್ಯಾಂಡಿಡೇಟ್‌ಗಳನ್ನು ನೇರವಾಗಿ ಸರ್ಕಾರಿ ಉದ್ಯೋಗಕ್ಕೆ ಸೇರಿಸಿಕೊಳ್ಳಬಾರದು. ಉದ್ಯೋಗಾಕಾಂಕ್ಷಿಗಳು ಖಾಸಗಿ ವಲಯದಲ್ಲಿ ಒಂದು ವರ್ಷ ಕೆಲಸ ಮಾಡಿ, ಬಳಿಕ ಸರ್ಕಾರಿ ಉದ್ಯೋಗಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು. ಈ ನೀತಿಯನ್ನು ಕಡ್ಡಾಯಗೊಳಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ನೇಮಕಾತಿಗೆ ಅಗತ್ಯವಿರುವ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕು ಎಂದು ಗೋವಾ ಸಿಎ ಪ್ರಮೋದ್ ಸಾವಂತ್ ಹೇಳಿದ್ದಾರೆ.