Saturday, 14th December 2024

ಗೋವಾ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಪಣಜಿ: ಪಕ್ಷದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಚೋಡಂಕರ್ ತಮ್ಮ ರಾಜೀನಾಮೆಯನ್ನು ಎಐಸಿಸಿಗೆ ಕಳುಹಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಚೋಡಂಕರ್ ಅವರ ರಾಜೀನಾಮೆ ಅಂಗೀಕರಿಸಲಾಗುವುದು ಮತ್ತು ಅವರ ಸ್ಥಾನಕ್ಕೆ ಹೊಸ ಮುಖವನ್ನು ತರಲಾಗುವುದು ಎಂದು ಮೂಲಗಳು ತಿಳಿಸಿವೆ. ಸಂಕಲ್ಪ ಅಮೋನ್ಕರ್, ಅಲೆಕ್ಸೊ ಸಿಕ್ವೇರಾ ಮತ್ತು ಎಲ್ವಿಸ್ ಗೋಮ್ಸ ಅವರಂತಹ ನಾಯಕರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ 11 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಮತ್ತು ಅದರ ಮಿತ್ರಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ ಒಂದು ಸ್ಥಾನ ವನ್ನು ಪಡೆದುಕೊಂಡಿತು, ಆದರೆ ಬಿಜೆಪಿ 20 ಸ್ಥಾನಗಳನ್ನು ಪಡೆದಿದೆ.