Friday, 13th December 2024

ಹಳಿ ತಪ್ಪಿದ ಗೋದಾವರಿ ಎಕ್ಸ್ ಪ್ರೆಸ್ ರೈಲಿನ 6 ಬೋಗಿ

ವದೆಹಲಿ : ವಿಶಾಖಪಟ್ಟಣಂನಿಂದ ಹೈದರಾಬಾದ್ ಗೆ ಹೋಗುತ್ತಿದ್ದ ವೇಳೆ ಬೆಳಗ್ಗೆ ತೆಲಂಗಾಣದ ಬೀಬಿನಗರ ಬಳಿ ಗೋದಾವರಿ ಎಕ್ಸ್ ಪ್ರೆಸ್ ರೈಲಿನ ಹಳಿ ತಪ್ಪಿದ್ದು, ಭಾರೀ ದುರಂತ ತಪ್ಪಿದೆ.

ರೈಲು ವಿಶಾಖಪಟ್ಟಣಂನಿಂದ ಹೈದರಾಬಾದ್ ಗೆ ಹೋಗುತ್ತಿದ್ದ ಗೋದಾವರಿ ಎಕ್ಸ್ ಪ್ರೆಸ್ ನ ಕನಿಷ್ಠ 6 ಬೋಗಿಗಳು ಬುಧವಾರ ಬೆಳಿಗ್ಗೆ ಹಳಿ ತಪ್ಪಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ.

ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಹಳಿ ತಪ್ಪಿದ ಕಾರಣ ಈ ಮಾರ್ಗದಲ್ಲಿ ಹಲವಾರು ರೈಲುಗಳ ಸಂಚಾರ ದಲ್ಲಿ ಅಸ್ತವ್ಯಸ್ತಗೊಂಡಿವೆ. ಭುವನಗಿರಿ, ಬೀಬಿನಗರ್ ಮತ್ತು ಘಾಟ್ಕೇಸರ್ ನಿಲ್ದಾಣಗಳಲ್ಲಿ ಅನೇಕ ರೈಲುಗಳನ್ನು ನಿಲ್ಲಿಸಲಾಗಿದೆ.