Friday, 13th December 2024

ಪಿಜ್ಜಾ ತಿನ್ನುತ್ತಿದ್ದ ಮಹಿಳೆಯ ಚಿನ್ನದ ಸರ ದರೋಡೆ

ಪಾಣಿಪತ್: ಪಿಜ್ಜಾ ತಿನ್ನುತ್ತಾ ಮೂವರು ಮಹಿಳೆಯರು ಕುಳಿತು ಮಾತನಾಡುತ್ತಿರುವಾಗಲೇ ವ್ಯಕ್ತಿಯೊಬ್ಬ ಮಹಿಳೆಯ ಚಿನ್ನದ ಸರವನ್ನು ಕಸಿದುಕೊಂಡು ಓಡಿ ಹೋದ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿದೆ.

ಸಾಕಷ್ಟು ಹೊತ್ತು ತನ್ನ ಸ್ನೇಹಿತರೊಂದಿಗೆ ಪಿಜ್ಜಾ ಸೇವಿಸುತ್ತಿದ್ದ ಮಹಿಳೆಯ ಮೇಲೆ ನಿಗಾ ವಹಿಸುತ್ತಿದ್ದ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಚೈನ್ ಕಸಿದು ಕೊಂಡು ಓಡಿ ಹೋಗಿದ್ದಾನೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಇದು ಈಗ ಸಾಮಾಜಿಕ ಜಾಲತಾಣದ ಎಕ್ಸ್ ನಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬ ಆರ್ಡರ್ ಸಂಗ್ರಹಿಸುವ ನೆಪದಲ್ಲಿ ಪಾಣಿಪತ್ ನಗರದ ತಹಸೀಲ್ ಕ್ಯಾಂಪ್ ರಸ್ತೆಯಲ್ಲಿರುವ ಪಿಜ್ಜಾ ಗ್ಯಾಲರಿಗೆ ಬಂದಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಚೈನ್ ಸ್ನ್ಯಾಚರ್ ಬಹಳಷ್ಟು ಹೊತ್ತು ಅಲ್ಲೇ ಕುಳಿತು ಪಿಜ್ಜಾ ತಿನ್ನುತ್ತಿದ್ದ ಮಹಿಳೆಯರ ಮೇಲೆ ಗಮನವಿಟ್ಟಿದ್ದ. ಆತ ಮಹಿಳೆಯ ಸರ ​​ಕಿತ್ತುಕೊಂಡು ಪರಾರಿಯಾದಾಗ ಪಿಜ್ಜಾ ಗ್ಯಾಲರಿ ಸ್ಟಾಫ್ ಯಾರೂ ಅಲ್ಲಿ ಇರಲಿಲ್ಲ.

ಮಹಿಳೆಯ ಸರ ಸುಮಾರು 20 ಗ್ರಾಂನದ್ದು ಎಂದು ಹೇಳಲಾಗಿದೆ. ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ.