Friday, 13th December 2024

ಗೋಲ್ಡನ್ ಟೆಂಪಲ್ ಬಳಿ ಮತ್ತೊಂದು ನಿಗೂಢ ಸ್ಫೋಟ..!

ಅಮೃತಸರ: ಪಂಜಾಬಿನ ಅಮೃತಸರದಲ್ಲಿ ಪಾರಂಪರಿಕ ದೇಗುಲಕ್ಕೆ ಹೋಗುವ ಹಾದಿ ಯಲ್ಲೇ ಮತ್ತೊಂದು ನಿಗೂಢ ಸ್ಫೋಟ ಸಂಭವಿಸಿದೆ. ಕೇವಲ ಮೂರು ದಿನಗಳ ಅಂತರ ದಲ್ಲೇ ನಡೆದಿರುವ ಎರಡನೇ ಸ್ಪೋಟ ಇದಾಗಿದೆ.

ಈ ಮೊದಲು ಶನಿವಾರ ರಾತ್ರಿ ನಿಗೂಢ ಸ್ಫೋಟ ಸಂಭವಿಸಿದ ಪರಿಣಾಮ ಪ್ರವಾಸಿಗರು ಸೇರಿದಂತೆ ಆರು ಮಂದಿ ಗಾಯ ಗೊಂಡಿದ್ದರು. ಸ್ಪೋಟದ ಕಾರಣ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಕಳಿಸಲಾಗಿದ್ದು, ಇದರ ಮಧ್ಯೆ ಮತ್ತೊಂದು ಸ್ಫೋಟ ನಡೆದಿದೆ.

ಇಂದಿನ ಸ್ಫೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಅಂತಿಮ ವರದಿ ಬಂದ ಬಳಿಕ ಸ್ಫೋಟದ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.