ನವದೆಹಲಿ: ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವು ಭಾರತದ ಆರ್ಥಿಕತೆಯಲ್ಲಿ ಹೊಸ ಅಧ್ಯಾಯ ಬರೆದಿದೆ.
ರಾಮ ಮಂದಿರದ ಪ್ರತಿಷ್ಠಾಪನೆಗೆ ಮುಂಚಿತವಾಗಿ ಭಕ್ತರು ಖರ್ಚು ಮಾಡುವ ಹಾಗೂ ದೇಶಾದ್ಯಂತ ಸರಕುಗಳನ್ನು ಮಾರಾಟ ಮಾಡುವ ಮೂಲಕ ಅನೇಕ ವ್ಯವಹಾರಗಳಿಂದ 1.25 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.
ಉತ್ತರ ಪ್ರದೇಶದಿಂದ 40,000 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ದೆಹಲಿಯಲ್ಲಿ 25 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆದಿದೆ.
ಸಿಎಐಟಿ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಸಿ.ಭಾರ್ತಿಯಾ ಮತ್ತು ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ನಂಬಿಕೆ ಮತ್ತು ಭಕ್ತಿಯಿಂದ ವ್ಯಾಪಾರದ ಮೂಲಕ ಇಷ್ಟೊಂದು ಬೃಹತ್ ಪ್ರಮಾಣದ ಹಣ ಮಾರುಕಟ್ಟೆಗೆ ಬಂದಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು.
ಎಲ್ಲಾ ವ್ಯಾಪಾರವು ಸಣ್ಣ ವ್ಯಾಪಾರ ಮಾಲೀಕರು ಮತ್ತು ಸಣ್ಣ ಉದ್ಯಮಿಗಳಿಂದ ನಡೆದಿದ್ದು, ಇದು ಮಾರುಕಟ್ಟೆಯಲ್ಲಿ ಆರ್ಥಿಕ ದ್ರವ್ಯತೆಯ ವರ್ಧನೆ ಯಾಗಿ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ. ರಾಮಮಂದಿರ ಉದ್ಘಾಟನೆಯಿಂದಾಗಿ ದೇಶದಲ್ಲಿ ವ್ಯಾಪಾರಕ್ಕೆ ಹಲವು ಹೊಸ ಅವಕಾಶಗಳು ಹುಟ್ಟಿ ಕೊಂಡಿದ್ದು, ದೊಡ್ಡ ಮಟ್ಟದಲ್ಲಿ ಜನರಿಗೆ ಉದ್ಯೋಗವೂ ಸಿಗಲಿದೆ.
ಹರ್ ಘರ್ ಅಯೋಧ್ಯೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆಜನವರಿ 1-22 ರವರೆಗೆ ನಡೆದ “ಹರ್ ಶೆಹರ್ ಅಯೋಧ್ಯೆ, ಹರ್ ಘರ್ ಅಯೋಧ್ಯೆ” ಅಭಿ ಯಾನದ ಭಾಗವಾಗಿ ದೇಶಾದ್ಯಂತ 30,000 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ವ್ಯಾಪಾರ ಸಂಸ್ಥೆಗಳು 1.5 ಮಿಲಿಯನ್‌ಗಿಂತಲೂ ಹೆಚ್ಚು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿವೆ ಎಂದು ಉಲ್ಲೇಖಿಸಿದ್ದಾರೆ.
ಸುಮಾರು 2 ಸಾವಿರ ಮೆರವಣಿಗೆಗಳು, ಮಾರುಕಟ್ಟೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮೆರವಣಿಗೆಗಳು, 1,000 ಕ್ಕೂ ಹೆಚ್ಚು ಸಂವಾದ ಕಾರ್ಯಕ್ರಮಗಳು ಮತ್ತು ಭಗವಾನ್ ರಾಮ ಭಜನೆಗಳನ್ನು ಒಳಗೊಂಡ ಸುಮಾರು 2,500 ಸಂಗೀತ ಕಾರ್ಯಕ್ರಮಗಳು ನಡೆದವು.
ಹಿಂದೂ ಪುರೋಹಿತರು ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ‘ದಕ್ಷಿಣೆ’ಯಾಗಿ ಗಣನೀಯ ಮೊತ್ತವನ್ನು ಗಳಿಸಿದರು. ಲಕ್ಷಾಂತರ ಕಿಲೋಗ್ರಾಂ ಗಳಷ್ಟು ಸಿಹಿತಿಂಡಿಗಳು ಮತ್ತು ಒಣ ಹಣ್ಣುಗಳನ್ನು ಪ್ರಸಾದವಾಗಿ ಮಾರಾಟ ಮಾಡಲಾಯಿತು.