Wednesday, 11th December 2024

ಬಿಜೆಪಿ ನಾಯಕರ ನಿವಾಸಕ್ಕೆ ಗ್ರೆನೇಡ್ ದಾಳಿ: ಏಳು ಜನರಿಗೆ ಗಾಯ

ರಜೌರಿ : ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಖಂಡ್ಲಿ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಜಸ್ಬೀರ್ ಸಿಂಗ್ ಅವರ ನಿವಾಸದ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ 4 ವರ್ಷದ ಮಗು ಮೃತಪಟ್ಟಿದ್ದು, ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ.

ರಜೌರಿಯ ಖಂಡ್ಲಿ ಪ್ರದೇಶದ ಬಿಜೆಪಿ ನಾಯಕ ಜಸ್ಬೀರ್ ಸಿಂಗ್ ಅವರ ಮನೆಯ ಮೇಲೆ ಅಪರಿಚಿತ ವ್ಯಕ್ತಿಗಳು ಗ್ರೆನೇಡ್ ದಾಳಿ ನಡೆಸಿದ್ದಾರೆ. ಪೀಪಲ್ಸ್ ಫ್ಯಾಸಿಸ್ಟ್ ವಿರೋಧಿ ರಂಗ ಗ್ರೆನೇಡ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಜಸ್ಬೀರ್ ಸಿಂಗ್ ಅವರ ನಿವಾಸದಲ್ಲಿ ಗ್ರೆನೇಡ್ ದಾಳಿ ಹಿನ್ನೆಲೆಯಲ್ಲಿ ರಜೌರಿಯಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬಿಎಸ್ ಎಫ್ ಬೆಂಗಾವಲು ಪಡೆಯ ಮೇಲೆ ಅಲ್ಟ್ರಾಗಳು ಗುಂಡು ಹಾರಿಸಿದ ನಂತರ, ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.