Saturday, 12th October 2024

ಜ್ಞಾನವಾಪಿ ಪ್ರಕರಣ: ಅ.11ರಂದು ವಿಚಾರಣೆ

ವಾರಣಾಸಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದ ಶಿವಲಿಂಗದ ವೈಜ್ಞಾನಿಕ ತನಿಖೆ ನಡೆಸುವಂತೆ ಕೋರಿ ಹಿಂದೂ ಭಕ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಾರಣಾಸಿ ನ್ಯಾಯಾಲಯ ಮುಂದೂಡಿದೆ.

ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯ ವಾದವನ್ನು ಆಲಿಸಿದ ನಂತರ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಅ.11ರಂದು ಅರ್ಜಿಯ ಬಗ್ಗೆ ಆದೇಶ ಪ್ರಕಟಿಸುವ ಸಾಧ್ಯತೆಯಿದೆ.

ಮುಖ್ಯ ದಾವೆಯಲ್ಲಿದ್ದ ಐವರು ಹಿಂದೂ ಮಹಿಳೆಯರಲ್ಲಿ (ವಾದಿಗಳು) ನಾಲ್ವರು ಮಹಿಳೆಯರು ಜ್ಞಾನವಾಪಿ ಮಸೀದಿ ಆವರಣ ದಲ್ಲಿ ಕಂಡುಬಂದಿದೆ ಎಂದು ಹೇಳಲಾದ ಶಿವಲಿಂಗದ ವೈಜ್ಞಾನಿಕ ತನಿಖೆಗಾಗಿ ಮನವಿ ಮಾಡಿದ್ದರು.

ವಾದಿಗಳಲ್ಲಿ ಒಬ್ಬರು (ರಾಖಿ ಸಿಂಗ್) ಕಾರ್ಬನ್ ಡೇಟಿಂಗ್ಗಾಗಿ ಮನವಿಯನ್ನು ವಿರೋಧಿಸಿ ದ್ದರು.

ಜ್ಞಾನವಾಪಿ ಮಸೀದಿ ಆವರಣದಲ್ಲಿ ಪೂಜೆಯ ಹಕ್ಕುಗಳನ್ನು ಕೋರಿ ಐವರು ಹಿಂದೂ ಮಹಿಳೆಯರು (ವಾದಿಗಳು) ಸಲ್ಲಿಸಿದ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ್ದ ಅರ್ಜಿಯನ್ನು  ವಾರಣಾಸಿ ನ್ಯಾಯಾಲಯವು ವಜಾಗೊಳಿಸಿದ 10 ದಿನಗಳ ನಂತರ ಈ ಮನವಿಯನ್ನು ಸಲ್ಲಿಸಲಾಗಿದೆ.