Saturday, 23rd November 2024

ಹನುಮ ಜಯಂತಿಯಂದು ಅಂಜನಿಪುತ್ರನಿಗೆ ಬೃಹತ್ ಲಡ್ಡು ನೈವೇದ್ಯ

ಜಬಲ್ಪುರ: ಏಪ್ರಿಲ್ 6 ರಂದು ಹನುಮ ಜಯಂತಿ ಆಚರಿಸಲು ದೇವಾಲಯದ ಆಡಳಿತಾಧಿಕಾರಿಗಳು ಬೃಹತ್ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಹನುಮ ಜಯಂತಿಯಂದು ಅಂಜನಿಪುತ್ರನಿಗೆ ಬೃಹತ್ ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುವುದು. ಇದಕ್ಕಾಗಿ ಒಂದು ಟನ್ ತೂಕದ ಲಡ್ಡು ತಯಾರಿಸಲಾಗಿದೆ.

ದೇವಾಲಯದ ಆಡಳಿತವು ಜಬಲ್ಪುರದಲ್ಲಿ ಹನುಮಂತನಿಗೆ ಲಡ್ಡೂಗಳನ್ನು ಅರ್ಪಿಸುವ ಆಚರಣೆಯನ್ನು ಪ್ರಾರಂಭಿಸಿತು. ಇದರ ಅಂಗವಾಗಿ ಹನುಮಂತನಿಗೆ ಬೃಹತ್ ಲಡ್ಡು ತಯಾರಿಸಲಾಗಿತ್ತು. ಈ ಲಡ್ಡುವನ್ನು ಮಹಿಳೆಯರೇ ತಯಾರಿಸುವುದು ವಿಶೇಷ. ಒಂದು ಟನ್ ತೂಕದ ಈ ಲಡ್ಡೂ ವನ್ನು ಮಾಡಲು, ಮಹಿಳೆಯರು ಬಹಳ ಭಕ್ತಿಯಿಂದ ಕೆಲಸ ಮಾಡಿದರು. ಕೇವಲ ಏಳೇ ದಿನಗಳಲ್ಲಿ ನಾಲ್ಕು ಅಡಿ ಎತ್ತರದ ಬೃಹತ್ ಲಡ್ಡುವನ್ನು ಮಹಿಳೆಯರು ಸಿದ್ಧಪಡಿಸಿದ್ದಾರೆ.

ಹನುಮ ಜಯಂತಿಯಂದು ಆಂಜನೇಯನಿಗೆ ವೇದ ಮಂತ್ರಗಳೊಂದಿಗೆ ವಿಶೇಷ ಪೂಜೆಗಳನ್ನು ಮಾಡಿ ಲಡ್ಡು ಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ನಂತರ ಲಡ್ಡುಗಳನ್ನು ಅನ್ನಪ್ರಸಾದ ಮತ್ತು ಲಡ್ಡು ಪ್ರಸಾದ ದೊಂದಿಗೆ ಭಕ್ತರಿಗೆ ವಿತರಿಸಲಾಗುತ್ತದೆ.