Friday, 13th December 2024

ಮಸೀದಿಯೊಳಗೆ ಹನುಮಾನ್‌ ಚಾಲೀಸ ಪಠಣ ಇಂದು

ತ್ತರ ಪ್ರದೇಶ: ಮಸೀದಿಯೊಳಗೆ ಹನುಮಾನ್‌ ಚಾಲೀಸ ಪಠಿಸುತ್ತೇವೆ ಎಂದು ಹಿಂದೂ ಮಹಾಸಭಾ ಕರೆಕೊಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮಥುರಾ ದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತನ್ನು ಮಾಡಲಾಗಿದೆ.

ಸುಮಾರು 1,500 ಪೊಲೀಸರು, ಸಶಸ್ತ್ರ ಪೊಲೀಸ್‌ ಪಡೆ ಮತ್ತು ಅರೆಸೇನಾ ಪಡೆ ಸಿಬ್ಬಂದಿ ಯನ್ನು ನಿಯೋಜಿಸಲಾಗಿದೆ. ಶ್ರೀ ಕೃಷ್ಣ ಜನ್ಮಸ್ಥಾನದ ದೇವಸ್ಥಾನ, ಶಾಹಿ ಮಸೀದಿ ಈದ್ಗಾ ಬಳಿ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಪಿಟಿಐಗೆ ಹೇಳಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ ದಿನೇಶ್ ಕೌಶಿಕ್, ಮಸೀದಿಯೊಳಗೆ ಹನುಮಾನ್ ಚಾಲೀಸಾವನ್ನು ಪಠಿಸುತ್ತೇವೆ ಎಂದು ಕರೆ ನೀಡಿದ್ದರು. ಈ

ಸೆಕ್ಷನ್‌ 144 ನ್ನು ಜಾರಿಗೊಳಿಸಲಾಗಿದ್ದು, ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಕಳೆದ ವರ್ಷವೂ ಹಿಂದೂ ಮಹಸಭಾ ಇಂಥದ್ದೇ ಕರೆಯನ್ನು ನೀಡಿತ್ತು. ಆ ಯೋಜನೆ ಯನ್ನು ಕೂಡ ಜಿಲ್ಲಾಡಳಿತ ವಿಫಲವಾಗಿಸಿತ್ತು.