Wednesday, 11th December 2024

ಡಿಸೆಂಬರ್ 6ರಂದು ಶಾಹಿ ಈದ್ಗಾ ಮಸೀದಿಯಲ್ಲಿ ಹನುಮಾನ್ ಚಾಲಿಸಾ ಪಠಣ

ವದೆಹಲಿ: ಶಾಹಿ ಈದ್ಗಾ ಮಸೀದಿಯಲ್ಲಿ ಹನುಮಾನ್ ಚಾಲಿಸಾ ಪಠಿಸಲಿದ್ದೇನೆ ಎಂದು ಅಖಿಲ ಭಾರತ ಹಿಂದು ಮಹಾಸಭಾ ನಾಯಕಿ ರಾಜ್ಯಶ್ರೀ ಚೌಧರಿ ಹೇಳಿಕೆ ನೀಡಿದ್ದಾರೆ.

ಬಾಬ್ರಿ ಮಸೀದಿ ಧ್ವಂಸಗೊಳಿಸಿದ 30ನೇ ವರ್ಷಾಚರಣೆಯ ದಿನವಾದ ಡಿಸೆಂಬರ್ 6ರಂದು ಹನುಮಾನ್ ಚಾಲಿಸಾವನ್ನು ಪಠಿಸಲು ನಿರ್ಧರಿಸಿದ್ದಾರೆ.

ಕಳೆದ ವರ್ಷವೇ ಶಾಹಿ ಈದ್ಗಾದಲ್ಲಿ ಹನುಮಾನ್‌ ಚಾಲಿಸಾ ಪಠಿಸಲು ನಿರ್ಧರಿಸಿದ್ದೆ. ಆದರೆ ಜಿಲ್ಲಾಡಳಿತ ಅನುಮತಿ ನಿರಾಕರಿ ಸಿತ್ತು. ಅಡಚಣೆ ಉಂಟಾಗಿದ್ದರಿಂದ ಹನುಮಾನ್ ಚಾಲಿಸಾ ಪಠಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಬಾರಿ ಹನುಮಾನ್ ಚಾಲಿಸಾ ಪಠಿಸುವುದು ನಿಶ್ಚಿತ ಎಂದು ತಿಳಿಸಿದ್ದಾರೆ.