Sunday, 13th October 2024

ಶಿಕ್ಷಕಿಗೆ ಕಿರುಕುಳ: ನಾಲ್ವರು ವಿದ್ಯಾರ್ಥಿಗಳ ವಶ

ಮೀರತ್ (ಉತ್ತರಪ್ರದೇಶ): ಮೀರತ್‌ನ ಶಾಲೆಯೊಂದರಲ್ಲಿ ಮಹಿಳಾ ಶಿಕ್ಷಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಶಿಕ್ಷಕಿಯ ಬಗ್ಗೆಅಶ್ಲೀಲ ಕಾಮೆಂಟ್‌ಗಳನ್ನು ರವಾನಿಸಿದ ಎರಡು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕ್ರಮ ತೆಗೆದು ಕೊಳ್ಳಲಾಗಿದೆ. ಕಿಥೌರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಧನಾ ಇನಾಯತ್‌ಪುರ ಗ್ರಾಮದ ಶಾಲೆಯಲ್ಲಿ ಬಾಲಕಿ ಸೇರಿದಂತೆ ವಿದ್ಯಾರ್ಥಿಗಳು ಓದುತ್ತಿದ್ದಾರೆ.

27 ವರ್ಷದ ಶಿಕ್ಷಕಿ ಸಲ್ಲಿಸಿದ ಲಿಖಿತ ದೂರಿನಲ್ಲಿ, 12 ನೇ ತರಗತಿಯ ಕೆಲವು ವಿದ್ಯಾರ್ಥಿ ಗಳು ದೀರ್ಘಕಾಲದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಜೂನ್ 24 ರಂದು ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ನನಗೆ “ಐ ಲವ್ ಯೂ” ಎಂದು ಹೇಳಿ ಮಿತಿಯನ್ನು ದಾಟಿದರು ಹಾಗೂ ಅದರ ವೀಡಿಯೊವನ್ನು ರೆಕಾರ್ಡ್ ಮಾಡಿದರು. ನಂತರ ಅವರು ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರು” ಎಂದು ಶಿಕ್ಷಕಿ ಆರೋಪಿಸಿದ್ದಾರೆ.