ನವದೆಹಲಿ: ಜಪಾನ್ ದೇಶದ ಮಹಿಳೆಯೊಬ್ಬರಿಗೆ ಹೋಳಿ ಹಬ್ಬದ ಸಂದರ್ಭ ದೌರ್ಜನ್ಯ ನಡೆಸಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಪಾನ್ ಮಹಿಳೆ ಯುವ ಪ್ರವಾಸಿ ಕೇಂದ್ರ ದೆಹಲಿಯ ಪಹರ್ಗಂಜ್ನಲ್ಲಿ ತಂಗಿದ್ದರು ಅವರ ಮೇಲೆ ಹೋಳಿ ಸಂದರ್ಭ ದೌರ್ಜನ್ಯ ನಡೆಸಿದ್ದ ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಒಬ್ಬ ಬಾಲಾಪರಾಧಿ ಇದ್ದಾನೆ ಎಂದು ತಿಳಿದುಬಂದಿದೆ.
ತನ್ನ ಮೇಲಾದ ಕಿರುಕುಳದ ಬಗ್ಗೆ ಮಹಿಳೆ ಇಲ್ಲಿಯವರೆಗೆ ದೂರು ದಾಖಲಿಸಿಲ್ಲ. ತಾನು ಬಾಂಗ್ಲಾದೇಶ ತಲುಪಿದ್ದು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರುವುದಾಗಿ ಮಹಿಳೆ ಟ್ವೀಟ್ ಮಾಡಿದ್ದಾಳೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೋಳಿ ಹಬ್ಬದ ಸಂದರ್ಭ ಮೂವರು ಜಪಾನ್ ಮಹಿಳೆಯನ್ನು ಹಿಡಿದುಕೊಂಡು ಆಕೆಯ ಮೇಲೆ ಬಣ್ಣ ಎರಚಿದ್ದೆ ಅಲ್ಲದೆ ಆಕೆಯೊಂದಿಗೆ ಅನುಚಿತ ವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿತ್ತು.