ನವದೆಹಲಿ : ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದಲ್ಲಿ ಹೊಸ ತೈಲ ಆವಿಷ್ಕಾರವನ್ನ ಘೋಷಿಸಿದ್ದಾರೆ.
ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿ.ಮೀ ದೂರದಲ್ಲಿ, ಮೊದಲ ಬಾರಿಗೆ ತೈಲವನ್ನ ಹೊರತೆಗೆಯಲಾಯಿತು.
ಇದರ ಕಾಮಗಾರಿ 2016-17ರಲ್ಲಿ ಪ್ರಾರಂಭವಾಯಿತು. ಆದರೆ ಕೋವಿಡ್ ಕಾರಣದಿಂದಾಗಿ ಸ್ವಲ್ಪ ವಿಳಂಬವಾಯಿತು. ಅಲ್ಲಿನ 26 ಬಾವಿಗಳಲ್ಲಿ 4 ಬಾವಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು.
“ನಾವು ಬಹಳ ಕಡಿಮೆ ಸಮಯದಲ್ಲಿ ಅನಿಲವನ್ನ ಹೊಂದುತ್ತೇವೆ” ಎಂದು ಅವರು ಹೇಳಿದರು.
ಮೇ ಮತ್ತು ಜೂನ್ ವೇಳೆಗೆ, ದಿನಕ್ಕೆ 45,000 ಬ್ಯಾರೆಲ್ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಉತ್ಪಾದನೆಯು ನಮ್ಮ ದೇಶದ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಶೇ.7 ರಷ್ಟು ಮತ್ತು ನಮ್ಮ ಅನಿಲ ಉತ್ಪಾದನೆಯ ಶೇ.7 ರಷ್ಟನ್ನು ಹೊಂದಿರುತ್ತದೆ” ಎಂದರು.
ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಬಂಗಾಳ ಕೊಲ್ಲಿಯ ಕೃಷ್ಣ ಗೋದಾವರಿ ಡೀಪ್ವಾಟರ್ ಬ್ಲಾಕ್ 98/2 ನಿಂದ “ಮೊದಲ ತೈಲ” ಉತ್ಪಾದಿಸಲು ಪ್ರಾರಂಭಿಸಿದೆ. ತೈಲವನ್ನ ಹೊರತೆಗೆಯುವ ಸ್ಥಳವು ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿ.ಮೀ ದೂರದಲ್ಲಿದೆ.
ಜಲಾನಯನ ಪ್ರದೇಶದಿಂದ ಗರಿಷ್ಠ ತೈಲ ಮತ್ತು ಅನಿಲ ಉತ್ಪಾದನೆಗಾಗಿ 3 ನೇ ಹಂತವು ಈಗಾಗಲೇ ನಡೆಯುತ್ತಿದೆ ಮತ್ತು ಜೂನ್ 2024 ರಲ್ಲಿ ಪೂರ್ಣ ಗೊಳ್ಳುವ ಸಾಧ್ಯತೆಯಿದೆ.