Monday, 14th October 2024

ಹತ್ವಾ ಮಾರುಕಟ್ಟೆ ಸಂಕೀರ್ಣದಲ್ಲಿ ಶಾಟ್ ಸರ್ಕ್ಯೂಟ್‌

ಪಾಟ್ನಾ: ಪಿರ್ಹಾಬೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಪಾಟ್ನಾದ ದುಸ್ರಾ ಡಿಯಾರಾ ಪ್ರದೇಶದಲ್ಲಿರುವ ಹತ್ವಾ ಮಾರುಕಟ್ಟೆ ಸಂಕೀರ್ಣದಲ್ಲಿ ಶಾಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ ಕಾಣಿಸಿಕೊಂಡಿದೆ.

ಈ ಸಂಕೀರ್ಣವು ಪಾಟ್ನಾದ ಐಷಾರಾಮಿ ಪ್ರದೇಶವಾಗಿದೆ ಎಂದು ಹೇಳಲಾಗುತ್ತದೆ. ಘಟನಾ ಸ್ಥಳಕ್ಕೆ 7ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.