Wednesday, 11th December 2024

ಇಡ್ಲಿ ಸ್ವಾದಿಸಿದ್ದೀರಿ…ಕಪ್ಪು ಬಣ್ಣದ ಇಡ್ಲಿ ಕಂಡಿದ್ದೀರಾ ?

Black Idly

ನಾಗ್ಪುರ: ನಾಗ್ಪುರ ಮೂಲದ ಫುಡ್‌ ಬ್ಲಾಗರ್‌ ವಿವೇಕ್‌ ಮತ್ತು ಆಯೇಷಾ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ವಿಡಿಯೋದಲ್ಲಿ ಕಪ್ಪು ಬಣ್ಣದ ಇಡ್ಲಿ ಹಿಟ್ಟಿನಿಂದ ಇಡ್ಲಿ ತಯಾರಿಸಿ, ಅದರ ಮೇಲೆ ತುಪ್ಪ ಸುರಿದು,

ನಾಗಪುರದ ವಾಲ್ಕ​ರ್ಸ್ ಸ್ಟ್ರೀಟ್‌ನಲ್ಲಿ ಕಪ್ಪು ಇಡ್ಲಿ ದೊರೆಯುತ್ತದೆ ಎಂಬ ಒಕ್ಕಣೆಯೊಂದಿಗೆ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಆದರೆ ವಿಡಿಯೋ ಕಂಡು ಕಂಗಾಲಾದ ನೆಟ್ಟಿಗರು, ‘ಬ್ರೋ ದಯವಿಟ್ಟು ಇಡ್ಲಿ ಮೇಲಿನ ದೌರ್ಜನ್ಯ ನಿಲ್ಲಿಸಿ’ ಎಂದು ಮನವಿ ಮಾಡಿದ್ದಾರೆ. ಮತ್ತೆ ಕೆಲವು ಇದು ಪಾತ್ರೆ ತೊಳೆಯುವ ಮೆಟಲ್‌ ಬ್ರೆಶ್‌ನಂತೆ ಕಾಣುತ್ತಿದೆ ಎಂದಿದ್ದಾರೆ.

ಆಹಾರೋದ್ಯಮದಲ್ಲಿ ಇಂದು ಸಾಕಷ್ಟು ಹೊಸತನಗಳು ಬಂದಿವೆ. ಭಾರತೀಯ ಹಾಗೂ ವಿದೇಶಿ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ, ಪಶ್ಚಿಮ ಬಂಗಾಳ ಗುಜರಾತ್‌ ಹೀಗೆ ನೀವು ಯಾವುದೇ ಪ್ರದೇಶಗಳಿಗೆ ಹೋದರೂ ಬೇರೆಯ ಆಹಾರ ಶೈಲಿ ಇರುತ್ತದೆ.

ಕೆಲವು ಆಹಾರಪ್ರೇಮಿಗಳು ಅಂತಹ ಆಹಾರ ಸಂಯೋಜನೆಗಳನ್ನು ತರುತ್ತಿದ್ದಾರೆ. ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿರುವ ಈ ಕಪ್ಪು ಇಡ್ಲಿ ವಿಡಿಯೋ ನೋಡಿ ಜನ ಬೇಸರಗೊಂಡಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬರು ಇಡ್ಲಿ ಮಾಡುವುದನ್ನು ಕಾಣಬಹುದು.

ವೀಡಿಯೋದ ವಿಶೇಷವೆಂದರೆ, ವ್ಯಕ್ತಿಯು ಕಂದು-ಕಪ್ಪು ಇಡ್ಲಿ ಹಿಟ್ಟನ್ನು ಸ್ಟೀಮರ್ ಪ್ಲೇಟ್‌ನಲ್ಲಿ ಇರಿಸಿ ಮತ್ತು ಅಂತಿಮವಾಗಿ ಕಪ್ಪು ಬಣ್ಣದ ಇಡ್ಲಿಗಳ ಮೇಲೆ ತುಪ್ಪ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸುತ್ತಿರುವುದು ಕಂಡುಬಂದಿದೆ.