Saturday, 14th December 2024

ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಸ್ಫೋಟ: 11 ಜನರ ಬಂಧನ

ಮೊಹಾಲಿ: ಪಂಜಾಬ್‌ನ ಸುರಕ್ಷಿತ ಗುಪ್ತಚರ ಇಲಾಖೆ ಪ್ರಧಾನ ಕಚೇರಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸ ಲಾಗಿದೆ.

ಮೊಹಾಲಿಯಲ್ಲಿ ಸೋಮವಾರ ರಾತ್ರಿ ನಡೆದ ಸ್ಫೋಟದ ಕುರಿತು ಪಂಜಾಬ್ ಸಿಎಂ ಭಗವಂತ್ ಮಾನ್ ನಿವಾಸದಲ್ಲಿ ಡಿಜಿಪಿ ಮತ್ತು ಇತರ ಹಿರಿಯ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ಮಂಗಳವಾರ ನಡೆಯಿತು.

ನಾನು ಡಿಜಿಪಿ ಮತ್ತು ಇತರ ಗುಪ್ತಚರ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಸದ್ಯ ತನಿಖೆ ನಡೆಸಲಾಗುತ್ತಿದ್ದು, ಸಂಜೆಯ ವೇಳೆಗೆ ವಿಷಯಗಳು ಸ್ಪಷ್ಟವಾಗಲಿವೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದರು.

ಎಸ್‌ಎಎಸ್‌ನಗರದ ಸೆಕ್ಟರ್ 77ರಲ್ಲಿರುವ ಪಂಜಾಬ್‌ ಪೊಲೀಸ್‌ ಗುಪ್ತಚರ ಕೇಂದ್ರದಲ್ಲಿ ಸೋಮವಾರ ರಾತ್ರಿ ಸಣ್ಣ ಸ್ಫೋಟ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳ ದಲ್ಲಿದ್ದು ತನಿಖೆ ನಡೆಸು ತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡ ಗಳನ್ನು ಕರೆಸಲಾಗಿದೆ.

ಗುಪ್ತಚರ ಪ್ರಧಾನ ಕಛೇರಿ ಮೇಲೆ ರಸ್ತೆಯಿಂದ ರಾಕೆಟ್ ಚಾಲಿತ ಗ್ರೆನೇಡ್ ಅಥವಾ ಆರ್‌ಪಿಜಿಯನ್ನು ಹಾರಿಸಲಾಗಿದೆ. ಈ ಸ್ಫೋಟ ದಿಂದಾಗಿ ಗಾಜುಗಳು ಒಡೆದು ಹೋಗಿವೆ.