Monday, 14th October 2024

‘ಅವತಾರ್ 2’ ಸಿನಿಮಾ ವೀಕ್ಷಿಸುತ್ತಿದ್ದ ವ್ಯಕ್ತಿ ನಿಧನ

ಮರಾವತಿ: ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ನಗರದಲ್ಲಿ ‘ಅವತಾರ್ 2’ ಸಿನಿಮಾ ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರನ್ನು ಲಕ್ಷ್ಮಿರೆಡ್ಡಿ ಶ್ರೀನು ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಅವತಾರ್ 2 ವೀಕ್ಷಿಸಲು ತನ್ನ ಸಹೋದರ ರಾಜು ಅವರೊಂದಿಗೆ ಪೆದ್ದಾಪುರಂನ ಚಿತ್ರಮಂದಿರಕ್ಕೆ ತೆರಳಿದ್ದರು.

ಸಿನಿಮಾದ ಮಧ್ಯೆಯೇ ಕುಸಿದು ಬಿದ್ದ ಶ್ರೀನು ಅವರನ್ನು ತಕ್ಷಣ ಆತನ ಕಿರಿಯ ಸಹೋ ದರ ರಾಜು ಅವರನ್ನು ಪೆದ್ದಾಪುರಂ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಲಕ್ಷ್ಮೀರೆಡ್ಡಿ ಅವರು ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ

ತೈವಾನ್‌ನಲ್ಲಿ 42 ವರ್ಷದ ವ್ಯಕ್ತಿಯೊಬ್ಬರು 2010 ರಲ್ಲಿ ಬಿಡುಗಡೆಯಾದ ‘ಅವತಾರ್’ ಚಿತ್ರದ ಮೊದಲ ಭಾಗವನ್ನು ವೀಕ್ಷಿಸುವಾಗ ಹೃದಯಾಘಾತದಿಂದ ನಿಧನರಾಗಿದ್ದರು.