Saturday, 14th December 2024

ಗುವಾಹಟಿಯ ಮತ್ತಷ್ಟು ಭಾಗಗಳಲ್ಲಿ ಭೂಕುಸಿತ: ರಸ್ತೆಗಳು ಜಲಾವೃತ

ಗುವಾಹಟಿ: ಸತತ ಮೂರನೇ ದಿನ ನಿರಂತರವಾಗಿ ಸುರಿಯುತ್ತಿರುವ ಮಳೆ ಯಿಂದಾಗಿ ಗುವಾಹಟಿಯ ಮತ್ತಷ್ಟು ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಈ ವರ್ಷ ಪ್ರವಾಹ ಮತ್ತು ಭೂಕುಸಿತದಿಂದ ರಾಜ್ಯದಲ್ಲಿ 42 ಸಾವುಗಳು ದಾಖಲಾ ಗಿದೆ.

ನಾಲ್ವರು ಕಳೆದ ಮಂಗಳವಾರ ಬೋರಗಾಂವ್ ಪ್ರದೇಶದಲ್ಲಿ ಭಾರಿ ಭೂ ಕುಸಿತದಲ್ಲಿ ಹೂತು ಹೋಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ ಭೂಕುಸಿತ ಗೀತಾನಗರ, ಸೋನಾಪುರ, ಕಾಲಾಪಹಾರ್ ಮತ್ತು ನಿಜರಪಾರ್ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸಿದೆ.

ನಗರದ ಹಲವಾರು ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಅನಿಲ್ ನಗರ, ನಬಿನ್ ನಗರ, ರಾಜ್‌ಗಢ ಲಿಂಕ್ ರಸ್ತೆ, ರುಕ್ಮಿಣಿ ಗಾಂವ್, ಹಟಿಗಾಂವ್ ಮತ್ತು ಕೃಷ್ಣಾ ನಗರಗಳು ಹೆಚ್ಚು ಪರಿಣಾಮ ಬೀರಿವೆ. ಈ ಪ್ರದೇಶಗಳಲ್ಲಿ ನಿಯೋಜಿಸಲಾದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಜನರನ್ನು ರಕ್ಷಿಸಲು ದೋಣಿಗಳನ್ನು ಬಳಸುತ್ತಿದ್ದಾರೆ.

ಪ್ರವಾಹದಿಂದಾಗಿ ಮಂಗಳವಾರದಿಂದ ಕತ್ತಲೆಯಲ್ಲಿ ಮುಳುಗಿರುವ ಪ್ರದೇಶ ಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಮತ್ತೆ ಆರಂಭಿಸಲು ಅಸ್ಸಾಂ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ ಪ್ರಯತ್ನಿಸುತ್ತಿದೆ. ಜೊತೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಕಳುಹಿಸ ಲಾಗಿದೆ.