Saturday, 14th December 2024

ರಾಮ ಮಂದಿರ ನಿರ್ಮಾಣ: ಹಿಂದೂಗಳಿಂದಲೇ ಧನ ಸಂಗ್ರಹ

ನವದೆಹಲಿ: ಅಯೋಧ್ಯಾದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಮ ಮಂದಿರ ನಿರ್ಮಾಣಕ್ಕೆ ಕೇವಲ ಹಿಂದೂಗಳಿಂದ ಮಾತ್ರ ಆರ್ಥಿಕ ಸಹಾಯ ಪಡೆಯಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

ವಿಹಿಂಪ ವಕ್ತಾರ ವಿಜಯ್‌ ಶಂಕರ್‌ ತಿವಾರಿ ಅವರು ಈ ಕುರಿತ ಅಭಿಯಾನದ ಬಗ್ಗೆ ಮಾತನಾಡಿ, ಶ್ರೀ ರಾಮ ಜನ್ಮಭೂಮಿ ಮಂದಿರ್‌ ನಿಧಿ ಸಮರ್ಪಣ್‌ ಅಭಿಯಾನವು ಜನವರಿ 15ರಿಂದ ಆರಂಭವಾಗಲಿದೆ. ಹಾಗೂ ಈ ವಿಚಾರದಲ್ಲಿ ಹಿಂದೂ ಕುಟುಂಬ ಗಳಿಂದ ಮಾತ್ರ ಆರ್ಥಿಕ ಸಹಾಯದ ಅಪೇಕ್ಷೆ ಇಡಲಾಗುವುದು ಎಂದರು. ರಾಮ ಮಂದಿರ ಕುರಿತಂತೆ ಇನ್ನೂ ಹಳೆ ಘಟನೆಗಳು ನೆನಪು ಮಾಸಿಲ್ಲ. ಈ ಘಟನೆ ಮರುಕಳಿಸದಂತೆ ತಡೆಯಲು ಈ ನಿರ್ಧಾರಕ್ಕೆ ಬಂದಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಇತರ ಧರ್ಮಿಯರನ್ನು ಕಡೆಗಣಿಸಿಲ್ಲ. ಆದರೆ, ರಾಮ ಭಕ್ತಾದಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು. ಇದೇ ವರ್ಷದ ಫೆಬ್ರವರಿ 27ರ ವರೆಗೆ ಅಭಿಯಾನ ನಡೆಯಲಿದೆ. ಉತ್ತರಾಖಂಡ್‌ ರಾಜ್ಯದಲ್ಲಿ ಫೆ.5ರಂದು ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ವಿವರ ನೀಡಿದರು.