ಹಣಕಾಸು ವರ್ಷ 2023ರ 3ನೇ ತ್ರೈಮಾಸಿಕದ ಐಡಿಸಿ ವರದಿಯ ಪ್ರಕಾರ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದೆ
ನವದೆಹಲಿ: ನೋಕಿಯಾ ಫೋನ್‌ಗಳನ್ನು ತಯಾರಿಸುವ ಎಚ್‌ಎಂಡಿ ಗ್ಲೋಬಲ್, ಫೀಚರ್ ಫೋನ್ ಮಾರುಕಟ್ಟೆಯಲ್ಲಿ ನಿರ್ವಿವಾದ ನಾಯಕನಾಗಿ ಹೊರಹೊಮ್ಮಿದೆ. ಹಣಕಾಸು ವರ್ಷ 2023ರ 3ನೇ ತ್ರೈಮಾಸಿಕದ ‘ಐಡಿಸಿ’ಯ ಇತ್ತೀಚಿನ ವರದಿಯ ಪ್ರಕಾರ, ಮೌಲ್ಯದ ಮೂಲಕ ಮಾರುಕಟ್ಟೆ ಪಾಲಿ ನಲ್ಲಿ ಅಗ್ರ ಸ್ಥಾನ ಮತ್ತು ಪರಿಮಾಣದ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ.
ಐಡಿಸಿ ವರದಿಯ ಪ್ರಕಾರ, ಎಚ್‌ಎಂಡಿ ಗ್ಲೋಬಲ್, ಮೌಲ್ಯದ ಆಧಾರದಲ್ಲಿ ಗಮನಾರ್ಹವಾದ ಶೇ 30.7ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಹಣಕಾಸು ವರ್ಷ 2023ರ ದ್ವಿತೀಯ ತ್ರೈಮಾಸಿಕದ ಮಾರುಕಟ್ಟೆ ಪಾಲಿಗೆ ಹೋಲಿಸಿದರೆ ಶೇ 4.2ರಷ್ಟು ಗಮನಾರ್ಹ ಹೆಚ್ಚಳ ದಾಖಲಿಸಿದೆ. ಪರಿಮಾಣದ ವಿಷಯದಲ್ಲಿ ಬ್ರ್ಯಾಂಡ್ ಶ್ಲಾಘನೀಯ ಎನ್ನಬಹುದಾದ ಶೇ 22.4ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇ 2.3ರಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ.
ಹಲವಾರು ಕಾರ್ಯತಂತ್ರದ ಉಪಕ್ರಮಗಳು ಮತ್ತು ಅನುಷ್ಠಾನಗಳು ಫೀಚರ್ ಫೋನ್ ಮಾರುಕಟ್ಟೆಯಲ್ಲಿ ‘ಎಚ್‌ಎಂಡಿ’ಯ ಗಮನಾರ್ಹ ಕಾರ್ಯ ಕ್ಷಮತೆಗೆ ಕೊಡುಗೆ ನೀಡಿವೆ.
ಕೊಡುಗೆ ನೀಡಿದ ಕೆಲ ಪ್ರಮುಖ ಸಂಗತಿಗಳು ಹೀಗಿವೆ:
- ಫೀಚರ್ ಫೋನ್‌ಗಳಲ್ಲಿ ಯುಪಿಐ ಅಂತರ್ಗತ: ನೋಕಿಯಾ ಫೀಚರ್ ಫೋನ್‌ಗಳಲ್ಲಿ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಸಂಯೋಜಿಸುವ ಮೂಲಕ ‘ಎಚ್‌ಎಂಡಿ’ಯು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ. ಈ ಸೌಲಭ್ಯವು ಫೀಚರ್ ಫೋನ್‌ಗಳ ಉಪಯುಕ್ತತೆ ಹೆಚ್ಚಿಸಿರುವುದರ ಜೊತೆಗೆ ಬಳಕೆದಾರರಿಗೆ ಸುರಕ್ಷಿತ ಮತ್ತು ಅನುಕೂಲಕರ ಡಿಜಿಟಲ್ ವಹಿವಾಟುಗಳಲ್ಲಿ ತೊಡಗಿಸಿ ಕೊಳ್ಳಲು ಹೊಸ ಮಾರ್ಗ ಗಳನ್ನು ತೆರೆದಿದೆ.
- ಹೀರೊ ಮಾದರಿಗಳ ನವೀಕರಣ: ಹೊಸ ವಿನ್ಯಾಸದ ಗುರುತು, ರೋಮಾಂಚಕ ಬಣ್ಣಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ದೊಡ್ಡ ಬ್ಯಾಟರಿ ಸಾಮರ್ಥ್ಯದೊಂದಿಗೆ ಹೀರೊ ಮಾದರಿಗಳನ್ನು ಯಶಸ್ವಿ ಯಾಗಿ ನವೀಕರಿಸಲಾಗಿದೆ. ಈ ವರ್ಧನೆಗಳು ಗ್ರಾಹಕರ ಆದ್ಯತೆಗಳೊಂದಿಗೆ ಹೊಂದಿಕೆ ಯಾಗುವುದರ ಜೊತೆಗೆ ವಿಸ್ತೃತ ಮತ್ತು ವಿಶ್ವಾಸಾರ್ಹ ಬಳಕೆದಾರರ ಅನುಭವವನ್ನು ಖಚಿತಪಡಿಸುತ್ತದೆ. ಉತ್ತಮ ವಿಶೇಷಣಗಳೊಂದಿಗೆ ಮರು-ಪರಿಚಯಿಸಲಾದ ಹೀರೊದ ಕೆಲವು ಮಾದರಿಗಳು ಹೀಗಿವೆ– ನೋಕಿಯಾ 105 2022, ನೋಕಿಯಾ 110, ನೋಕಿಯಾ 110 4ಜಿ, ನೋಕಿಯಾ 225 4ಜಿ, ನೋಕಿಯಾ ಎಕ್ಸ್‌ಪ್ರೆಸ್ ಮ್ಯೂಸಿಕ್, ನೋಕಿಯಾ 5710 ಎಕ್ಸ್‌ಪ್ರೆಸ್ ಆಡಿಯೊ ಜೊತೆಗೆ ಟಿಡಬ್ಲ್ಹುಎಸ್ ಮತ್ತು ನೋಕಿಯಾ 2660 ಫ್ಲಿಪ್.
- ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳು ಮತ್ತು ಅನುಭವ: ‘ಎಚ್‌ಎಂಡಿ’ಯು ಬಳಕೆದಾರ-ಕೇಂದ್ರಿತ ವಿನ್ಯಾಸ ಮತ್ತು ವೈಶಿಷ್ಟ್ಯಗಳಿಗೆ ಆದ್ಯತೆ ನೀಡಿದ್ದು, ಫೀಚರ್ ಫೋನ್‌ಗಳನ್ನು ಹೆಚ್ಚು ಸುಲಭವಾಗಿ ಮತ್ತು ವೈವಿಧ್ಯಮಯ ಬಳಕೆದಾರರು ಆನಂದಿಸುವಂತೆ ಮಾಡುತ್ತದೆ. ಬಳಕೆದಾರ ಸ್ನೇಹಿ ಅನುಭವವನ್ನು ಸೃಷ್ಟಿಸುವುದರ ಮೇಲಿನ ಗಮನಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬ್ರ್ಯಾಂಡ್‌ನ ಮಾರುಕಟ್ಟೆ ಪ್ರಾಬಲ್ಯಕ್ಕೆ ಇದು ಕೊಡುಗೆ ನೀಡುತ್ತದೆ.
- ಸದೃಢ ಆಫ್‌ಲೈನ್ ಮತ್ತು ಆನ್‌ಲೈನ್ ಉಪಸ್ಥಿತಿ: ಆಫ್‌ಲೈನ್ ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ‘ಎಚ್‌ಎಂಡಿ’ಯ ವ್ಯಾಪಕ ಉಪಸ್ಥಿತಿಯು ಅದರ ಫೀಚರ್ ಫೋನ್‌ಗಳ ಎಲ್ಲೆಡೆ ಲಭ್ಯತೆ ಮತ್ತು ಗೋಚರತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಸಮಗ್ರ ವಿಧಾನವು ‘ಎಚ್‌ಎಂಡಿ’ಯ ಮಾರುಕಟ್ಟೆ ಉಪಸ್ಥಿತಿಯನ್ನು ಬಲಪಡಿಸಿದೆ. ನೋಕಿಯಾ ಫೀಚರ್ ಫೋನ್‌ಗಳು ಹೆಚ್ಚಿನ ಗ್ರಾಹಕರಿಗೆ ಸುಲಭವಾಗಿ ದೊರೆಯು ವಂತೆ ಮಾಡಿದೆ.
ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ಉತ್ತಮ-ಗುಣಮಟ್ಟದ, ವಿಶ್ವಾಸಾರ್ಹ ಮತ್ತು ನವೀನ ಮೊಬೈಲ್ ಪರಿಹಾರಗಳನ್ನು ನೀಡಲು ‘ಎಚ್‌ಎಂಡಿ’ಯು ಸಮರ್ಪಣೆಗೊಂಡಿದೆ. ಈ ಯಶಸ್ಸನ್ನು ಆಧರಿಸಿ ಮುಂದುವರೆಯಲು ಮತ್ತು ಫೀಚರ್ ಫೋನ್ ಮಾರುಕಟ್ಟೆಯನ್ನು ಮುನ್ನಡೆಸಲು ಬ್ರ್ಯಾಂಡ್ ಎದುರು ನೋಡುತ್ತಿದೆ.