Saturday, 14th December 2024

ಗೃಹ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

ವದೆಹಲಿ: ನವದೆಹಲಿಯ ಗೃಹ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿರುವ ರೈಸಿನಾ ಹಿಲ್ಸ್ ಪ್ರದೇಶದಲ್ಲಿರುಬ ಗೃಹ ಸಚಿವಾಲಯದ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಟ್ಟಡದ 2ನೇ ಮಹಡಿಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಎಸಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಂಪ್ಯೂಟರ್ ಗಳು, ದಾಖಲೆಗಳು, ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ.

ಈ ಕಟ್ಟಡ ಗೃಹ ವ್ಯವಹಾರಗಳು ಮತ್ತು ಸಿಬ್ಬಂದಿ ಸಚಿವಾಲಯಗಳನ್ನು ಹೊಂದಿದೆ. ಮಾಹಿತಿ ಪ್ರಕಾರ ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಯಾರಿಗೂ ಗಾಯಗಳು ಸಂಭವಿಸಿಲ್ಲ. ಅಗ್ನಿಶಮಕ ಸಿಬ್ಬಂದಿಗಳ ಮೂಲಕ ತ್ವರಿತವಾಗಿ ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ.

ಘಟನೆ ಸಂಭವಿಸಿದ್ದ ವೇಳೆ ಗೃಹ ಸಚಿವ ಅಮಿತ್ ಶಾ ಕಟ್ಟಡದಲ್ಲಿ ಇರಲಿಲ್ಲ. ಆದರೆ ಹಲವು ಉನ್ನತ ಅಧಿಕಾರಿಗಳು ಇದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.