Friday, 13th December 2024

ಹೋಂಡಾ ಮೋಟಾರ್ ಸೈಕಲ್  & ಸ್ಕೂಟರ್ ಇಂಡಿಯಾದಿಂದ ಹಾರ್ನೆಟ್ 2.0 ಮತ್ತು ಡಿಯೋ 125 ರೆಪ್ಸೋಲ್ 2023 ಆವೃತ್ತಿಗಳ ಬಿಡುಗಡೆ

ನವದೆಹಲಿ: ಚೊಚ್ಚಲ ಭಾರತ್‌ ಗ್ರ್ಯಾಂಡ್ ಪ್ರಿಕ್ಸ್‌ಗೆ ಸಜ್ಜಾಗುತ್ತಿರುವ ಮತ್ತು ಹೋಂಡಾದ ರೇಸಿಂಗ್ ಪರಿ(ಡಿಎನ್‌ಎ)ಯನ್ನೇ ರಸ್ತೆ ಸವಾರಿಗೆ ಸಂಪೂರ್ಣ ಥ್ರಿಲ್ ಆಗಿ ಪರಿವರ್ತಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ಇಂದು ಹಾರ್ನೆಟ್ 2.0 ಮತ್ತು ಡಿಯೋ 125ರ ಅತ್ಯಾಕರ್ಷಕ 2023 ರೆಪ್ಸೋಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಇವುಗಳ ಆಕರ್ಷಕ ಬೆಲೆ ಕ್ರಮವಾಗಿ 1,40,000 ರೂ. ಮತ್ತು 92,300 ರೂ. ಆಗಿದೆ. ಈ ಹೊಸ ಸೀಮಿತ ಆವೃತ್ತಿಯ  ರೆಪ್ಸೋಲ್ ಮಾದರಿಗಳು ದೇಶಾದ್ಯಂತ ಎಲ್ಲಾ ಹೋಂಡಾ ರೆಡ್ ವಿಂಗ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿವೆ.

ಎಚ್ಎಂಎಸ್ಐ ಕಂಪನಿಯ ಹೊಸ 2023ರ ಕೊಡುಗೆಗಳನ್ನು ಪರಿಚಯಿಸಿ ಮಾತನಾಡಿದ ಹೋಂಡಾ ಮೋಟಾರ್‌ ಸೈಕಲ್ & ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಅಧ್ಯಕ್ಷ ಮತ್ತು ಸಿಇಒ ಶ್ರೀ ಟ್ಸುಟ್ಸುಮು ಒಟಾನಿ, ‘ರೇಸಿಂಗ್ ಹೋಂಡಾದ ಹೃದಯವಾಗಿದೆ. ಮೋಟಾರ್‌ಸೈಕಲ್ ರೇಸಿಂಗ್‌ನ ಪರಾಕಾಷ್ಠೆ ಎನಿಸಿರುವ ಮೋಟೊಜಿಪಿ, ಇದೇ  ಮೊದಲ ಬಾರಿಗೆ ಭಾರತ ದಲ್ಲಿ ನಡೆಯುತ್ತಿದೆ. ಭಾರತದ ರೇಸಿಂಗ್ ಅಭಿಮಾನಿಗಳು ಹೋಂಡಾ ತಯಾರಿಕೆಗಳು ಮತ್ತು ಕೊಡುಗೆಗಳ ಇತಿಹಾಸ ವೀಕ್ಷಿಸಲು ಸಾಕಷ್ಟು ಉತ್ಸಾಹ ಹೊಂದಿದ್ದರು. ಹಾಗಾಗಿಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲುನಾವು ಹಾರ್ನೆಟ್ 2.0 ಮತ್ತು ಡಿಯೋ 125 2023ರ ರೆಪ್ಸೋಲ್ ಆವೃತ್ತಿಗಳನ್ನು ಪ್ರಾರಂಭಿಸಿದ್ದೇವೆ. ಮುಂಬರುವ ಭಾರತ್‌ಜಿಪಿಗೆ ಉತ್ತಮ ಯಶಸ್ಸು ಬಯಸುತ್ತೇವೆ’ ಎಂದರು.

2023ರ ರೆಪ್ಸೋಲ್ ಸೀಮಿತ ಆವೃತ್ತಿ ಮಾದರಿಗಳ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಹೋಂಡಾ ಮೋಟಾರ್‌ ಸೈಕಲ್ & ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಶ್ರೀ ಯೋಗೇಶ್ ಮಾಥುರ್, “ನಾವು ಹೊಸ ಹಾರ್ನೆಟ್ 2.0 ಮತ್ತು ಡಿಯೋ 125ರ 2023 ರೆಪ್ಸೋಲ್ ಆವೃತ್ತಿ ಮಾರುಕಟ್ಟೆಗೆ ಪರಿಚಯಿಸಲು ಉತ್ಸುಕರಾಗಿದ್ದೇವೆ. ಈ ಮಾದರಿಗಳು ಆಯಾ ವಿಭಾಗಗಳಲ್ಲಿ ಗ್ರಾಹಕರನ್ನು ಸಂತೋಷಪಡಿಸಿವೆ. ಈ ಸೀಮಿತ ಆವೃತ್ತಿಯ ಹೊಸ ಕೊಡುಗೆಗಳ ಬಿಡುಗಡೆಯೊಂದಿಗೆಭಾರತದ ಮೋಟೋಜಿಪಿ ಅಭಿಮಾನಿಗಳಿಗಾಗಿ ಭಾರತೀಯ ರಸ್ತೆಗಳಲ್ಲಿ ಹೋಂಡಾದ ರೇಸಿಂಗ್ ಸ್ವರೂಪ(ಡಿಎನ್‌ಎ)ವನ್ನೇ ಪರಿವರ್ತಿಸಲು ನಾವು ಸಂತೋಷಪಡುತ್ತೇವೆ. ಮೊದಲ ಭಾರತ್‌ಜಿಪಿಗಾಗಿ ನಾವು ರೆಪ್ಸೊಲ್ ಹೋಂಡಾ ತಂಡಕ್ಕೆ ನಮ್ಮ ಶುಭಾಶಯಗಳನ್ನು ತಿಳಿಸುತ್ತೇವೆ” ಎಂದರು.

ಎಲ್ಲಾ ಹೊಸ ಹೋಂಡಾ ಹಾರ್ನೆಟ್ 2.0 ರೆಪ್ಸೋಲ್ ಆವೃತ್ತಿಯು ಸುಧಾರಿತ ತಂತ್ರಜ್ಞಾನದ ಅಥವಾ ಅತ್ಯಾಧುನಿಕ ಗ್ರಾಫಿಕ್ಸ್‌ನೊಂದಿಗೆ ಅತ್ಯಾಕರ್ಷಕ ಮತ್ತು ಆಕ್ರಮಣಕಾರಿ ವಿನ್ಯಾಸ ಪ್ರದರ್ಶಿಸುತ್ತದೆ. ಇದು ಬಾಡಿ ಪ್ಯಾನೆಲ್‌ಗಳು ಮತ್ತು ಮಿಶ್ರಲೋಹದ ಚಕ್ರಗಳಲ್ಲಿ ರೆಪ್ಸೋಲ್ ರೇಸಿಂಗ್ ಸ್ಟ್ರೈಪ್‌ಗಳೊಂದಿಗೆ ರಾಸ್ ವೈಟ್ ಮತ್ತು ವೈಬ್ರೆಂಟ್ ಆರೆಂಜ್‌ನ ಆಕರ್ಷಕ ಡ್ಯುಯಲ್-ಟೋನ್ ಬಣ್ಣದ ಸಂಯೋಜನೆ ಹೊಂದಿದೆ. ಹಾರ್ನೆಟ್ 2.0ರ ಫಾರ್ವರ್ಡ್ ಲೀನಿಂಗ್ ಏರೋಡೈನಾಮಿಕ್ ಸ್ಟೈಲಿಂಗ್ ಮತ್ತು ಬೃಹತ್ ಇಂಧನ ಟ್ಯಾಂಕ್  ವಾಹನದ ಪ್ರಾಬಲ್ಯ ಮತ್ತು ರಸ್ತೆಯಲ್ಲಿ ಸದೃಢ ಉಪಸ್ಥಿತಿಯನ್ನು ಪ್ರದರ್ಶಿಸುತ್ತದೆ.

ಸ್ಟೈಲಿಂಗ್ ಅನ್ನು ಎಲ್ಇಡಿ ಬೆಳಕಿನ ವ್ಯವಸ್ಥೆಯಿಂದ (ಎಲ್ಇಡಿ ಹೆಡ್‌ಲ್ಯಾಂಪ್, LED ವಿಂಕರ್‌ಗಳು ಮತ್ತು X-ಆಕಾರದ LED ಟೈಲ್ ಲ್ಯಾಂಪ್) ಪ್ರಕಾಶಮಾನಗೊಳಿಸಲಾಗಿದೆ. ಆದರೆ ಸ್ಪೋರ್ಟಿ ಸ್ಪ್ಲಿಟ್ ಸೀಟ್ ಮತ್ತು ಟ್ಯಾಂಕ್ ಪ್ಲೇಸ್‌ಮೆಂಟ್‌ನಲ್ಲಿ ಅಳವಡಿಸಿರುವ ಕೀಅದರ ಸ್ಟ್ರೀಟ್ ಫೈಟರ್ ಪಾತ್ರವನ್ನು ಹೆಚ್ಚಿಸುತ್ತದೆ. ಸುಧಾರಿತ ಸಂಪೂರ್ಣ ಡಿಜಿಟಲ್ ಲಿಕ್ವಿಡ್ ಕ್ರಿಸ್ಟಲ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್ಸವಾರನಿಗೆ ಸಮರ್ಪಕ ಮಾಹಿತಿಯನ್ನು ಒದಗಿಸುತ್ತದೆ. ಹಗಲು ಮತ್ತು ರಾತ್ರಿ ವೇಳೆಯಲ್ಲಿ ಉತ್ತಮ ಗೋಚರತೆಗಾಗಿ 5 ಹಂತದ ಆಧುನೀಕರಣಗೊಳಿಸಬಹುದಾದ ಬೆಳಕಿನ ಸೌಲಭ್ಯ ಒದಗಿಸಲಾಗಿದೆ.

ಶಕ್ತಿಶಾಲಿ 184.40ಸಿಸಿ, 4 ಸ್ಟ್ರೋಕ್ಸಿಂಗಲ್-ಸಿಲಿಂಡರ್ ಬಿಎಸ್6 ಒಬಿಡಿ2 ನಿಯಮಗಳ ಅನುಸರಣೆಯ ಪಿಜಿಎಂ-ಎಫ್ಐ ಎಂಜಿನ್ 12.70 ಕಿಲೋ ವ್ಯಾಟ್ ಮತ್ತು 15.9 ಎನ್ಎಂ ಅನ್ನು ಹೊರಹಾಕುತ್ತದೆ.  ಹಾರ್ನೆಟ್ 2.0 ರೋಮಾಂಚಕ ಕಾರ್ಯಕ್ಷಮತೆ ಹೊಂದಿದೆ. ಜತೆಗೆಹೊಸ ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಅನ್ನು ನಿರ್ವಹಿಸುವ ಹೊಸ ಅಸಿಸ್ಟ್ ಸ್ಲಿಪ್ಪರ್ ಕ್ಲಚ್ಅಪ್ ಶಿಫ್ಟ್ ಗಳನ್ನು ಸರಾಗಗೊಳಿಸುತ್ತದೆ ಮತ್ತು ಕಠಿಣ ಎನಿಸುವ ಹಾರ್ಡ್ ಡೌನ್ ಶಿಫ್ಟ್‌ ಸಂದರ್ಭದಲ್ಲಿ ರೇರ್ ವ್ಹೀಲ್ ಲಾಕ್-ಅಪ್ ಗಳನ್ನು ನಿರ್ವಹಿಸುತ್ತದೆ. ಈ ಮೂಲಕ ಸವಾರನ ಸುರಕ್ಷತೆ ಹೆಚ್ಚಿಸುತ್ತದೆ.

 ವಾಹನವನ್ನು ರಸ್ತೆಗಳಿಸುವಾಗಹೆಚ್ಚಿನ ನಿಯಂತ್ರಣ ಖಚಿತಪಡಿಸಿಕೊಳ್ಳಲುಹಾರ್ನೆಟ್ 2.0 ರೆಪ್ಸೋಲ್ ಆವೃತ್ತಿಯು ಏಕ-ಚಾನಲ್ ಎಬಿಎಸ್ ನೊಂದಿಗೆ ಡ್ಯುಯಲ್ ಪೆಟಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಮೊನೊ ಶಾಕ್ ಹಿಂಬದಿಯ ಸಸ್ಪೆನ್ಶನ್ ಗುರುತ್ವಾಕರ್ಷಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿವಾಹನ ನಿಲ್ಲಿಸುವಾಗ ಅಥವಾ ಚಾಲಿಸುವಾಗ ಅತ್ಯುನ್ನತ ಸ್ಥಿರತೆ ಮತ್ತು ಅತ್ಯುತ್ತಮ ಸವಾರಿ ಅನುಭವ ಒದಗಿಸುತ್ತದೆ.