ಹೋಶಿಯಾರಪುರ: ಪೊಲೀಸ್ ಸಿಬ್ಬಂದಿಯಿದ್ದ ಬಸ್ಸು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 13 ಜನರಿಗೆ ಗಂಭೀರ ಗಾಯಗಳಾಗಿವೆ.
30 ಪೊಲೀಸರನ್ನು ಹೊತ್ತ ಬಸ್ ಜಲಂಧರ್‌ನಲ್ಲಿರುವ ಪಂಜಾಬ್ ಸಶಸ್ತ್ರ ಪೊಲೀಸ್ ಸಂಸ್ಥೆ ಕಡೆಯಿಂದ ಗುರುದಾಸ್‌ಪುರಕ್ಕೆ ಹೋಗುತ್ತಿದ್ದ ವೇಳೆ ಮುಕೇರಿಯದ ಬಳಿ ಅಘಘಾತ ಸಂಭವಿಸಿದೆ. ದಟ್ಟ ಮಂಜು ಕವಿದಿದ್ದ ಕಾರಣ ಟ್ರಕ್ ನಿಂತಿರುವುದು ಚಾಲಕನಿಗೆ ಗೋಚರಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹರ್ದೇವ್ ಸಿಂಗ್, ಹಿರಿಯ ಕಾನ್‌ಸ್ಟೆಬಲ್ ಗುರುಪ್ರೀತ್ ಸಿಂಗ್ ಮತ್ತು ಮಹಿಳಾ ಕಾನ್‌ಸ್ಟೆಬಲ್ ಶಾಲು ರಾಣಾ ಎಂದು ಗುರುತಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಹೋಶಿಯಾರಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಲಂಬಾ ಭೇಟಿ ನೀಡಿದ್ದಾರೆ.