ಗುವಾಹಟಿ: ಮೇಘಾಲಯದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬರ್ನಾಡ್ ಎನ್ ಮರಕ್ ಅಲಿಯಾಸ್ ರಿಂಪು ವಿರುದ್ಧ ‘ಮಾನವ ಕಳ್ಳಸಾಗಾಣಿಕೆ’ ಪ್ರಕರಣ ದಾಖಲಾಗಿದೆ.
ಪಶ್ಚಿಮ ಗರೋ ಹಿಲ್ ಜಿಲ್ಲೆಗಳ ತುರಾದಲ್ಲಿ ಮೇಘಾಲಯ ಪೊಲೀಸರು ಆತನಿಗಾಗಿ ಹುಡುಕಾಟ ನಡೆಯುತ್ತಿದ್ದು, ತಾನು ಪರಾರಿಯಾಗಿಲ್ಲ. ಪೊಲೀಸ್ ತನಿಖೆಗೆ ಯಾವಾಗಲೂ ಸಹಕರಿಸುತ್ತೇನೆ ಎಂದು ಹೇಳಿಕೊಂಡಿರುವ ರಿಂಪು, ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ನನ್ನ ವಿರುದ್ಧ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಫೆಬ್ರವರಿಯಲ್ಲಿ ನಡೆದ ಕೆಲವು ಪೋಕ್ಸೊ ಪ್ರಕರಣಗಳೊಂದಿಗೆ ಜೋಡಿಸಲು ಯತ್ನಿಸುತ್ತಿದ್ದಾರೆ. ಸಂಗ್ಮಾ ಅವರು ರಾಜಕೀಯ ವಾಗಿ ನೆಲೆಯನ್ನು ಕಳೆದುಕೊಳ್ಳುತ್ತಿ ದ್ದಾರೆ ಮತ್ತು ರಾಜಕೀಯ ಕಾರಣಗಳಿಂದ ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಹಳೆಯ ಪೋಕ್ಸೊ ಪ್ರಕರಣದಲ್ಲಿ ಆರೋಪಿಯೂ ಅಲ್ಲ ಎಂದು ಹೇಳಿಕೊಂಡಿ ದ್ದಾರೆ.
ಶುಕ್ರವಾರ ಮತ್ತು ಶನಿವಾರದ ಮಧ್ಯ ರಾತ್ರಿ ಬರ್ನಾರ್ಡ್ ಎನ್ ಮರಾಕ್ ಒಡೆತನದ ರೆಸಾರ್ಟ್‌ನಲ್ಲಿ ದಾಳಿ ನಡೆಸಿದ ನಂತರ ಈ ಪ್ರಕರಣ ದಾಖಲಿಸಲಾಗಿದೆ. ಆರು ಮಕ್ಕಳು ‘ಕೊಳಕು ಕ್ಯಾಬಿನ್ ತರಹದ ಅನೈರ್ಮಲ್ಯ ಕೊಠಡಿಗಳಲ್ಲಿ ಲಾಕ್ ಆಗಿರುವುದು’ ಕಂಡುಬಂದಿದೆ. ರೆಸಾರ್ಟ್‌ನಿಂದ ವೇಶ್ಯಾವಾಟಿಕೆ ನಡೆಸುತ್ತಿದೆ ಮತ್ತು ಬಿಜೆಪಿ ನಾಯಕ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಮೇಘಾಲಯ ಪೊಲೀಸರು ಹೇಳಿದ್ದಾರೆ.
ತಮ್ಮ ರೆಸಾರ್ಟ್‌ನಲ್ಲಿ ಯಾವುದೇ ತಪ್ಪು ನಡೆದಿಲ್ಲ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಸೂಚನೆಯ ಮೇರೆಗೆ ವಾರಂಟ್ ಇಲ್ಲದೆ ದಾಳಿ ನಡೆಸಲಾಗಿದೆ.