Wednesday, 11th December 2024

ಕೋತಿಗಳ ಹಿಂಡಿನ ದಾಳಿಗೆ ಸಿಲುಕಿ 70 ವರ್ಷದ ವೃದ್ದೆ ಸಾವು

ಹೈದರಾಬಾದ್: ತೆಲಂಗಾಣದಲ್ಲಿ 20ಕ್ಕೂ ಹೆಚ್ಚು ಕೋತಿಗಳ ಹಿಂಡಿನ ದಾಳಿಗೆ ಸಿಲುಕಿ 70 ವರ್ಷದ ಮಹಿಳೆ ಯೊಬ್ಬರು ಮೃತಪಟ್ಟಿದ್ದಾರೆ.
ಸಾವಿಗೀಡಾದವರನ್ನು ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ಚಟರಬೋಯಿನಾ ನರಸವ್ವ ಎಂದು ಗುರುತಿಸ ಲಾಗಿದೆ.
ಸಂತ್ರಸ್ತೆ ತನ್ನ ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಕಿರಿಯ ಮಗಳು ಸುಗುಣ ಮದುವೆ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರಿಂದ ಸಂತ್ರಸ್ತೆ ಮನೆಯಲ್ಲಿ ಒಬ್ಬರೇ ಇದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ನರಸವ್ವ ಸಹಾಯಕ್ಕಾಗಿ ಕೂಗಿಕೊಂಡರೂ, ಭಯಭೀತರಾದ ನೆರೆಹೊರೆಯವರು ಆಕೆಯನ್ನು ರಕ್ಷಿಸಲು ಯಾವುದೇ ಪ್ರಯತ್ನ ಮಾಡಿಲ್ಲ.
ಮಂಗಗಳ ದಾಳಿಯಿಂದಾಗಿ ವೃದ್ಧೆಯ ಎದೆ, ಬೆನ್ನು ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸ್ವಲ್ಪ ಸಮಯದ ನಂತರ ಸುಗುಣ ಮನೆಗೆ ಮರಳಿದ ನಂತರವೇ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರಸವ್ವ ಮೃತಪಟ್ಟಿದ್ದಾರೆ.